ಶನಿವಾರ, ಮೇ 15, 2021
24 °C
ಮೂರು ದಿನಗಳಲ್ಲಿ 7 ಸೋಂಕಿತರು ಮೃತ

ಉಡುಪಿ: ಕೋವಿಡ್‌ಗೆ ಮೂವರು ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಡುಪಿ: ಜಿಲ್ಲೆಯಲ್ಲಿ ಶನಿವಾರ ಮತ್ತೆ ಮೂವರು ಕೋವಿಡ್‌ನಿಂದ ಮೃತಪಟ್ಟಿದ್ದಾರೆ. ಕೇವಲ ಮೂರು ದಿನಗಳ ಅವಧಿಯಲ್ಲಿ 7 ಮಂದಿ ಕೊರೊನಾ ಸಾವನ್ನಪ್ಪಿದ್ದಾರೆ. ಇದರದೊಂದಿಗೆ ಸೋಂಕಿತರ ಸಾವಿನ ಸಂಖ್ಯೆ 201ಕ್ಕೆ ಏರಿಕೆಯಾಗಿದೆ.

ಉಡುಪಿ ತಾಲ್ಲೂಕಿನ 64 ವರ್ಷದ ವೃದ್ಧ, 73 ವರ್ಷದ ವೃದ್ಧೆ ಹಾಗೂ ಕುಂದಾಪುರ ತಾಲ್ಲೂಕಿನ 94 ವರ್ಷದ ವೃದ್ಧರು ಮೃತಪಟ್ಟವರು. ಮೂವರಿಗೂ ಉಸಿರಾಟದ ತೀವ್ರ ಸಮಸ್ಯೆ ಸೇರಿದಂತೆ ಹಲವು ಕಾಯಿಲೆಗಳಿದ್ದವು. ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಶನಿವಾರ ಜಿಲ್ಲೆಯಲ್ಲಿ 430 ಮಂದಿಗೆ ಸೋಂಕು ದೃಢಪಟ್ಟಿದ್ದು, 276 ಮಂದಿಗೆ ಸೋಂಕಿನ ಲಕ್ಷಣಗಳಿದ್ದರೆ 154 ಮಂದಿಗೆ ಲಕ್ಷಣಗಳು ಇಲ್ಲ. ಸೋಂಕಿತರಲ್ಲಿ 226 ಉಡುಪಿ, 162 ಕುಂದಾಪುರ ಮತ್ತು 39 ಕಾರ್ಕಳ ತಾಲೂಕಿನವರಾಗಿದ್ದು, ಮೂವರು ಹೊರ ಜಿಲ್ಲೆಯವರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು