ಉಡುಪಿ: ಜಿಲ್ಲೆಯಲ್ಲಿ ಶುಕ್ರವಾರ 22 ಮಂದಿಯಲ್ಲಿ ಕೋವಿಡ್–19 ದೃಢಪಟ್ಟಿದ್ದು, ಉಡುಪಿಯ 11, ಕುಂದಾಪುರದ 6 ಹಾಗೂ ಕಾರ್ಕಳದ ಐವರಿಗೆ ಸೋಂಕು ಕಾಣಿಸಿಕೊಂಡಿದೆ.

ಜಿಲ್ಲೆಯಲ್ಲಿ 23673 ಸೋಂಕಿತ ಪ್ರಕರಣಗಳಿದ್ದು, 77 ಸಕ್ರಿಯ ಸೋಂಕಿತರು ಇದ್ದಾರೆ. ಇದುವರೆಗೂ 23406 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. 190 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ.

ಜಿಲ್ಲೆಯಲ್ಲಿ ಕೋವಿಡ್ ಲಸಿಕಾ ಅಭಿಯಾನ ಮುಂದುವರಿದಿದ್ದು, ಮೊದಲ ಹಂತದ ಅಭಿಯಾನದಲ್ಲಿ 17,762 ಮಂದಿಗೆ ಲಸಿಕೆ ಹಾಕಲಾಗಿದ್ದು, ಶೇ 74 ಗುರಿ ಸಾಧನೆಯಾಗಿದೆ. 9,253 ಮಂದಿಗೆ ಮೊದಲ ಹಂತದಲ್ಲಿ ಎರಡನೇ ಡೋಸ್ ನೀಡಲಾಗಿದೆ.

ಎರಡನೇ ಹಂತದಲ್ಲಿ 3,183 ಮಂದಿ ಮುಂಚೂಣಿ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ಹಾಕಲಾಗಿದೆ. ಮೂರನೇ ಹಂತದ ಅಭಿಯಾನದಲ್ಲಿ 60 ವರ್ಷ ಮೇಲ್ಪಟ್ಟ 1,595 ಮಂದಿ ಇದುವರೆಗೂ ಲಸಿಕೆ ಪಡೆದಿದ್ದಾರೆ. 45 ರಿಂದ 59 ವರ್ಷದೊಳಗಿನ 48 ಮಂದಿ ಕೋವಿಡ್ ಚುಚ್ಚುಮದ್ದು ಹಾಕಿಸಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.