ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಿಂಕ್ ಕ್ಲಿಕ್ ಮಾಡಿದರೆ ಹಣ ಮಾಯ

Last Updated 4 ಆಗಸ್ಟ್ 2021, 16:23 IST
ಅಕ್ಷರ ಗಾತ್ರ

ಉಡುಪಿ: ಆನ್‌ಲೈನ್ ವಂಚಕರು ಮೊಬೈಲ್‌ಗೆ ಕಳಿಸಿದ ಲಿಂಕ್‌ ಕ್ಲಿಕ್ ಮಾಡಿ ವ್ಯಕ್ತಿಯೊಬ್ಬರು ₹ 33,500 ಕಳೆದುಕೊಂಡಿದ್ದಾರೆ.

ಮಣಿಪಾಲದ ಅಂಬರ್‌ಕರ್ ಮೋಹನ್‌ ಬಾಬು ವಂಚನೆಗೆ ಒಳಗಾದವರು. ಅಂಬರ್‌ಕರ್ ಎಸ್‌ಬಿಐ ಬ್ಯಾಂಕ್‌ನಲ್ಲಿ ಖಾತೆ ಹೊಂದಿದ್ದು, ಮಂಗಳವಾರ ಕೆವೈಸಿ ಅಪ್‌ಡೇಟ್‌ ಮಾಡುವಂತೆ ಅವರ ಮೊಬೈಲ್‌ಗೆ ಸಂದೇಶ ಬಂದಿದೆ. ಇದನ್ನು ನಂಬಿ ಲಿಂಕ್ ಕ್ಲಿಕ್ ಮಾಡಿದಾಗ ಅವರ ಖಾತೆಯಿಂದ ₹ 20,000 ಹಾಗೂ ₹ 13,500 ನಗದು ಕಡಿತವಾಗಿದೆ. ವಂಚನೆ ಸಂಬಂಧ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಫೇಸ್‌ಬುಕ್‌ ಸ್ನೇಹ: ₹19 ಲಕ್ಷ ವಂಚನೆ

ಉಡುಪಿ: ಫೇಸ್‌ಬುಕ್‌ನಲ್ಲಿ ಪರಿಚಿತನಾದ ವ್ಯಕ್ತಿಯೊಬ್ಬ ನಂಬಿಸಿ ಮಹಿಳೆಯೊಬ್ಬರಿಗೆ ₹ 19 ಲಕ್ಷ ವಂಚನೆ ಎಸಗಿದ್ದಾನೆ.

ಲಿನೆಟ್‌ ಸೀಮಾ ರೊಡ್ರಿಗಸ್‌ ವಂಚನೆಗೊಳಗಾದವರು. ಶಂಕರಪುರದ ಲಿನೆಟ್‌ ಕುವೈತ್‌ನಲ್ಲಿ ಉದ್ಯೋಗದಲ್ಲಿದ್ದು, ಮೇನಲ್ಲಿ ಫೇಸ್‌ಬುಕ್‌ ಮೂಲಕ ಡಾ. ಆ್ಯಂಡ್ರಿವ್‌ ಫೆಲಿಕ್ಸ್‌ ಎಂಬಾತ ಪರಿಚಿತನಾಗಿದ್ದ. ವೈದ್ಯನೆಂದು ಹೇಳಿಕೊಂಡ ಆತ, ದೆಹಲಿಯಲ್ಲಿ ಫಾರ್ಮಸಿ ತೆರೆಯುತ್ತಿರುವುದಾಗಿ ತಿಳಿಸಿ ಹಣದ ಸಹಾಯ ಕೋರಿದ್ದಾನೆ. ಬಳಿಕ ಹಂತ ಹಂತವಾಗಿ ₹ 19 ಲಕ್ಷವನ್ನು ಖಾತೆಗೆ ಹಾಕಿಸಿಕೊಂಡು ವಂಚನೆ ಎಸಗಿದ್ದಾನೆ ಎಂದು ಮಹಿಳೆ ದೂರು ನೀಡಿದ್ದು, ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT