ಅಫಜಲಪುರ (ಕಲಬುರಗಿ ಜಿಲ್ಲೆ), ಉಡುಪಿ : ಉಡುಪಿ ಜಿಲ್ಲೆಯ ಕಾರ್ಕಳ ಸಮೀಪ ಕ್ರೂಸರ್(ತೂಫಾನ್) ವಾಹನ ಹಾಗೂ ಸಾರಿಗೆ ಬಸ್ ನಡುವೆ ಸಂಭವಿಸದ ಭೀಕರ ಅಪಘಾತದಲ್ಲಿ ಚಾಲಕ ಸೇರಿ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ತಾಲ್ಲೂಕಿನ ದೇವಲ ಗಾಣಗಾಪುರದ ಚೇತನ್ ಮಾದರ(18) ಮತ್ತು ರೋಹಿದಾಸ್ ಮಾದರ (19) ಹಾಗೂ ಮಲ್ಲಮ್ಮ (45) ಅದರಂತೆ ಚಾಲಕ ಮಾನಪ್ಪ (30) ಎಂಬವರು ಅವರು ಸ್ಥಳದಲ್ಲಿ ಮೃತಪಟ್ಟಿದ್ದಾರೆ.

ಅಪಘಾತದಲ್ಲಿ ಕ್ರೂಸರ್ ವಾಹನ ನಜ್ಜುಗುಜ್ಜಾಗಿದೆ.

ತಾಲ್ಲೂಕಿನ ದೇವಲಗಣಗಾಪುರದ ಕುಟುಂಬವೊಂದರ 12 ಮಂದಿ ಕ್ರೂಸರ್ ವಾಹನ ಮೂಲಕ ಉಡುಪಿ ಜಿಲ್ಲೆಗೆ ಪ್ರವಾಸಕ್ಕೆ ಹೋಗಿದ್ದರು.

ಶನಿವಾರ ಸಂಜೆ ಕಾರ್ಕಳದಿಂದ ಕ್ರೂಸರ್ ಮೂಲಕ ಉಡುಪಿಗೆ ಸಂಚರಿಸುವ ಮಧ್ಯದ ಕಾರ್ಕಳ ಹತ್ತಿರ ಬಸ್ಸಿಗೆ ಮತ್ತು ಕ್ರೂಸರ್ ಮುಖಾಮುಖಿ ಡಿಕ್ಕಿ ಹೊಡೆದು ಅವಘಡ ಸಂಭವಿಸಿದೆ ಎಂದು ತಿಳಿದು ಬಂದಿದೆ.

ದುರ್ಘಟನೆಯಲ್ಲಿ ಇನ್ನುಳಿದ 9 ಜನರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಉಡುಪಿ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.

ಸಂಗೀತ ಎಂಬವರಿಗೆ ಒಂದು ಕೈ ಮತ್ತು ಕಾಲು ಕಟ್ಟಾಗಿದೆ ಎಂದು ತಿಳಿದ ಬಂದಿದೆ. ಅವಘಡದ ಮಾಹಿತಿ ದೊರೆತ ಬೆನ್ನಲ್ಲೆ ಗಾಣಗಾಪುರದ ಮೃತರ ಮನೆಯಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ.

ಈ ಕುರಿತು ಉಡುಪಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.