ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಸ್ಪರ ಸಹಾಯ ಗುಣ ಬೆಳೆಸಿಕೊಳ್ಳಿ: ಶಿವಾನಂದ ಪೈ

‘ಅಮೃತಭಾರತಿ ವಿಶ್ವ ಸಾರಥಿ’ ಉಪನ್ಯಾಸ ಕಾರ್ಯಕ್ರಮ
Last Updated 15 ಆಗಸ್ಟ್ 2022, 4:23 IST
ಅಕ್ಷರ ಗಾತ್ರ

ಕಾರ್ಕಳ: ‘ಮಾನವರು ಪರಸ್ಪರ ಸಹಾಯ ಗುಣಗಳನ್ನು ಬೆಳೆಸಿಕೊಂಡು ಮುಂದು
ವರಿಯಬೇಕು’ ಎಂದು ಭುವನೇಂದ್ರ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಸಿಎ ಶಿವಾನಂದ ಪೈ ಹೇಳಿದರು.

ಇಲ್ಲಿನ ಭುವನೇಂದ್ರ ಕಾಲೇಜಿನಲ್ಲಿ ಆಯೋಜಿಸಿದ್ದ ಸ್ವಾತಂತ್ರ್ಯದ ಮಹೋತ್ಸವದ ಪ್ರಯುಕ್ತ ‘ಅಮೃತಭಾರತಿ ವಿಶ್ವ ಸಾರಥಿ’ ಅಭಿಯಾನದ ಸರಣಿ ಉಪನ್ಯಾಸ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮಂಗಳೂರು ವಿಶ್ವವಿದ್ಯಾಲಯದ ಕೊಂಕಣಿ ಅಧ್ಯಯನ ಪೀಠ, ಶಿಕ್ಷಕರ ಸಂಘ, ಧರ್ಮಸ್ಥಳ ಮಂಜುನಾಥೇಶ್ವರ ತುಳು ಅಧ್ಯಯನ ಪೀಠ ಹಾಗೂ ಭುವನೇಂದ್ರ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕ ಇವುಗಳ ಸಹಯೋಗದಲ್ಲಿ ಕಾರ್ಯಕ್ರಮ ನಡೆಯಿತು.

ಪ್ರಧಾನ ಉಪನ್ಯಾಸಕ ಮುನಿರಾಜ ರೆಂಜಾಳ, ಮಂಗಳೂರು ವಿಶ್ವವಿದ್ಯಾಲಯದ ಕೊಂಕಣಿ ಅಧ್ಯಯನ ಪೀಠದ ನಿರ್ದೇಶಕ ಡಾ.ಜಯವಂತ ನಾಯಕ್ ಆಶಯ ನುಡಿಗಳನ್ನಾಡಿದರು.

ಕಾರ್ಕಳದ ಸ್ವಾತಂತ್ರ್ಯ ಹೋರಾಟಗಾರರ ಕುಟುಂಬಿಕರನ್ನು ಗೌರವಿಸಲಾಯಿತು.

ವೆಂಕಟೇಶ ಪ್ರಭು, ಕಾಲೇಜಿನ ಪ್ರಾಚಾರ್ಯ ಡಾ. ಮಂಜುನಾಥ್. ಎ. ಕೋಟ್ಯಾನ್, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ. ದತ್ತಾತ್ರೇಯ ಮಾರ್ಪಳ್ಳಿ, ನಿಟ್ಟೆ ರಾಮಚಂದ್ರ ನಾಯಕ್, ಸುಚಿತ್ರಾ ಇದ್ದರು. ಶ್ವೇತಾ ಸ್ವಾಗತಿಸಿದರು. ಸುಚಿತ್ರಾ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT