ಶಿರ್ವ: ‘ಜಗತ್ತಿಗೆ ಜೀವನದರ್ಶನ ಹಾಕಿಕೊಟ್ಟ ಜನಾಂಗವೇ ಹಿಂದೂ ಸಮಾಜ. ಇದರಲ್ಲಿ ಅಂತಃಸತ್ವ, ಕೃತಜ್ಞತೆಯ ಭಾವ ಇದೆ. ಎಲ್ಲರಲ್ಲೂ ದೇವರನ್ನು ನೋಡುವ ಸಮಾಜ ನಮ್ಮದು. ಹೋರಾಟದ ಸಂಸ್ಕೃತಿಯೇ ನಮ್ಮನ್ನು ಈವರೆಗೆ ಉಳಿಸಿ ಬೆಳೆಸಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖಂಡ ವೆಂಕಟರಮಣ ಪ್ರಸಾದ್ ಕಾರ್ಕಳ ಹೇಳಿದರು.

ಅವರು ಶಿರ್ವ, ಬೆಳ್ಳೆ, ಕಟ್ಟಿಂಗೇರಿ ಗ್ರಾಮಗಳನ್ನು ಒಳಗೊಂಡ ಹಿಂದೂ ಸಂಗಮ ಆಯೋಜನಾ ಸಮಿತಿ ಕಾಪು ತಾಲ್ಲೂಕು ಶಿರ್ವ ಮಂಡಲ ವತಿಯಿಂದ ಮಟ್ಟಾರಿನಲ್ಲಿ ನಡೆದ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಂಸ್ಕಾರ ಉಳಿಸಿ ಬೆಳೆಸುವ ಕಾರ್ಯ ಮನೆಯಿಂದಲೇ ನಡೆಯಬೇಕು. ನನ್ನ ದೇಶ ಎಂದು ಯೋಚನೆ ಮಾಡುವ ಸಮಾಜ ನಿರ್ಮಾಣವಾದಾಗ ಸರ್ವಶ್ರೇಷ್ಠ ಭಾರತವಾಗುತ್ತದೆ. ಪರಿಸರ ಸಂರಕ್ಷಣೆ ಜೊತೆಗೆ ಸಾಮರಸ್ಯ, ಸ್ವದೇಶಿ, ನಾಗರಿಕ ಕರ್ತವ್ಯ ಪಾಲನೆಯೊಂದಿಗೆ ಶಕ್ತಿವಂತ ಸಮಾಜದ ನಿರ್ಮಾಣಕ್ಕೆ ಸಿದ್ಧರಾಗಿ ಎಂದು ಹೇಳಿದರು.

ಶಿರ್ವ ಮಾಣಿಬೆಟ್ಟು ದೇವಳದ ಪ್ರಧಾನ ಅರ್ಚಕ ವಿಷ್ಣುಮೂರ್ತಿ ಉಪಾಧ್ಯಾಯ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಂಚಾಲಕ ಜಯಪ್ರಕಾಶ್ ಪ್ರಭು ಸ್ವಾಗತಿಸಿದರು. ನಿವೃತ್ತ ಪ್ರಾಂಶುಪಾಲ ಸುಧಾಕರ ಮಾರ್ಲ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಅಯ್ಯಪ್ಪ ಸ್ವಾಮಿ ಭಕ್ತವೃಂದದ ಜಿಲ್ಲಾ ಉಪಾಧ್ಯಕ್ಷ ಗೋಪಾಲ ಪೂಜಾರಿ, ಬಂಟಕಲ್ಲು ದೇವಳದ ಆಡಳಿತ ಮಂಡಳಿ ಸದಸ್ಯ ಸುರೇಂದ್ರ ನಾಯಕ್ ಬೆಳಂಜಾಲೆ, ವಿಷ್ಣುಮೂರ್ತಿ ಬಾಲಸಂಸ್ಕಾರ ಕೇಂದ್ರದ ಸಂಯೋಜಕಿ ವಿದ್ಯಾ, ಮಟ್ಟಾರು ವಿಶ್ವ ಹಿಂದೂ ಪರಿಷದ್ ಅಧ್ಯಕ್ಷ ಜಗದೀಶ ಆಚಾರ್ಯ, ಮಟ್ಟಾರು ರತ್ನಾಕರ ಹೆಗ್ಡೆ, ಕೊಲ್ಲಬೆಟ್ಟು ರವೀಂದ್ರ ಶೆಟ್ಟಿ, ಉದ್ಯಮಿ ರಾಮಚಂದ್ರ ನಾಯಕ್ ಪಡುಬೆಳ್ಳೆ, ಸುಂದರ ಪ್ರಭು ಶಿರ್ವ ಪಾಲ್ಗೊಂಡಿದ್ದರು. ಹರೀಶ್ ಪಾಟ್ಕರ್ ಬೆಳಂಜಾಲೆ ನಿರೂಪಿಸಿದರು. ವೀರೇಂದ್ರ ಪಾಟ್ಕರ್ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.