ಭಾನುವಾರ, ನವೆಂಬರ್ 28, 2021
19 °C

ಮಕ್ಕಳೊಂದಿಗೆ ಬಿಸಿಯೂಟ ಮಾಡಿದ ಡಿಡಿಪಿಐ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ತಾಲ್ಲೂಕಿನ ತೆಂಕನಿಡಿಯೂರು ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಿಗೆ ಶನಿವಾರ ಭೇಟಿನೀಡಿದ ಡಿಡಿಪಿಐ ಎನ್‌.ಎಚ್‌.ನಾಗೂರ ಮಕ್ಕಳ‌ ಕಲಿಕಾ ಪ್ರಗತಿ ಪರಿಶೀಲಿಸಿ, ಮಧ್ಯಾಹ್ನದ ಬಿಸಿಯೂಟದ ರುಚಿ ನೋಡಿದರು.

ಶಾಲಾ ಭೇಟಿವೇಳೆ ಮಕ್ಕಳೊಂದಿಗೆ ಸಮಾಲೋಚನೆ ನಡೆಸಿದಿ ಡಿಡಿಪಿಐ ಶಾಲೆಗಳು ಆರಂಭವಾಗಿದ್ದು ಉತ್ತಮ ಅಧ್ಯಯನ ಮಾಡುವಂತೆ ತಿಳಿ ಹೇಳಿದರು. ಬಳಿಕ ಪೋಷಕರೊಂದಿಗೂ ಸಮಾಲೋಚನೆ ನಡೆಸಿ ಮಕ್ಕಳನ್ನು ಸೋಮವಾರದಿಂದ ಶಾಲೆಗೆ ಕಳಿಸಲು ಮನವಿ ಮಾಡಿದರು.

ತರಗತಿಯೊಳಗೆ ಕುಳಿತು ಶಿಕ್ಷಕರ ಬೋಧನಾ ವಿಧಾನವನ್ನು ಪರಿಶೀಲಿಸಿ ಶೈಕ್ಷಣಿಕ ದಾಖಲೆಗಳನ್ನು ಸರಿಯಾಇ ನಿರ್ವಹಿಸುವಂತೆ ಸೂಚನೆ ನೀಡಿದರು. ಶಾಲಾ ಮಕ್ಕಳಿಗೆ ಹೆಚ್ಚು‌ ಕಲಿಕಾ ಚಟುವಟಿಕೆಗಳನ್ನು ಮಾಡಿಸುವ ಮೂಲಕ ಕಲಿಕಾ ದೃಢೀಕರಣಕ್ಕೆ ಸೂಚಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು