ಮಂಗಳವಾರ, ಸೆಪ್ಟೆಂಬರ್ 17, 2019
22 °C

ಏಡಿ ನುಂಗಿದ ಹೆಬ್ಬಾವು ಸಾವು

Published:
Updated:
Prajavani

ಉಡುಪಿ: ಮಲ್ಪೆಯಲ್ಲಿ ದೊಡ್ಡ ಗಾತ್ರದ ಏಡಿಯನ್ನು ನುಂಗಿದ ಹೆಬ್ಬಾವೊಂದು ಮೃತಪಟ್ಟಿದೆ.

ಗುರುವಾರ ಶೇಖರ್ ಕೋಟ್ಯಾನ್ ಎಂಬುವರು ಮೀನು ಹಿಡಿಯಲು ಹೋಗಿದ್ದಾಗ ಏಡಿಗಳು ಸಿಕ್ಕಿದ್ದವು. ಅವುಗಳನ್ನೆಲ್ಲ ಮನೆಯ ಪಕ್ಕದಲ್ಲಿ ರಾಶಿ ಹಾಕಿದ್ದರು.

ಈ ಸಂದರ್ಭ ಹಸಿದ ಹೆಬ್ಬಾವೊಂದು ಏಡಿಯನ್ನು ನುಂಗಿತ್ತು. ಬಳಿಕ ಏಡಿಯು ಹೆಬ್ಬಾವಿನ ಹೊಟ್ಟೆಯನ್ನು ಬಲವಾಗಿ ಕಚ್ಚಿದ ಪರಿಣಾಮ ಕೆಲಹೊತ್ತಿನಲ್ಲೇ ಹೆಬ್ಬಾವು ಮೃತಪಟ್ಟಿದೆ ಎಂದು ರೈಲು ಯಾತ್ರಿಕರ ಸಂಘದ ಕಾರ್ಯದರ್ಶಿ ಒಲಿವರ್‌ ಡಿಸೋಜ ಮಾಹಿತಿ ನೀಡಿದರು.

ಶೇಖರ್‌ ಕೋಟ್ಯಾನ್‌ ಅವರು ಹೆಬ್ಬಾವನ್ನು ಪಿಲಿಕುಳಕ್ಕೆ ನೀಡಲು ನಿರ್ಧರಿಸಿದ್ದರು. ಅಷ್ಟರಲ್ಲಿ ಅದು ಮೃತಪಟ್ಟಿದ್ದರಿಂದ ಅದನ್ನು ಹೂಳಲಾಯಿತು ಎಂದು ತಿಳಿಸಿದರು.

Post Comments (+)