ಗುರುವಾರ , ಅಕ್ಟೋಬರ್ 17, 2019
24 °C

ಉಡುಪಿ: ಶಿರ್ವ ಚರ್ಚ್‌ನ ಸಹಾಯಕ ಧರ್ಮಗುರು ಮಹೇಶ್ ಡಿಸೋಜಾ ಆತ್ಮಹತ್ಯೆ

Published:
Updated:
Prajavani

ಉಡುಪಿ: ಶಿರ್ವ ಡಾನ್ ಬಾಸ್ಕೊ ಶಾಲೆಯ ಪ್ರಾಂಶುಪಾಲ ಹಾಗೂ ಉಡುಪಿ ಧರ್ಮಪ್ರಾಂತ್ಯದ ಸಹಾಯಕ ಧರ್ಮ ಗುರು ಮಹೇಶ್ ಡಿಸೋಜಾ (36) ಶುಕ್ರವಾರ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಶಾಲೆಯ ಕ್ಯಾಬಿನ್ ಒಳಗೆ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಉಡುಪಿ ಧರ್ಮಪ್ರಾಂತ್ಯ ರಚನೆಯಾದ ಬಳಿಕ ಮಹೇಶ್ ಡಿಸೋಜ ಅವರು ಮೊದಲ ಸಹಾಯಕ ಧರ್ಮ ಗುರುವಾಗಿ ನೇಮಕವಾಗಿದ್ದರು.

ಶಿರ್ವದ ಮೂಡುಬೆಳ್ಳೆ ಮೂಲದ ಡಿಸೋಜಾ ಅವರು 2013ರಲ್ಲಿ ಧರ್ಮಗುರು ದೀಕ್ಷೆ ಪಡೆದಿದ್ದರು. ಆತ್ಮಹತ್ಯೆಗೆ ನಿಖರ ಕಾರಣ ತಿಳಿದಿಲ್ಲ.

Post Comments (+)