ಕೋಟ (ಬ್ರಹ್ಮಾವರ): ಕೋಟ ಹಂದಟ್ಟಿನ ಹಂದೆ ಮನೆತನದ 99 ವರ್ಷ ವಯಸ್ಸಿನ ವೈದ್ಯ ಡಾ.ಎಚ್.ವಿ.ಹಂದೆ ಅವರಿಗೆ ವೈದ್ಯಕೀಯ ಕ್ಷೇತ್ರದ ಸಾಧನೆಗಾಗಿ 2026ರ ಪದ್ಮಶ್ರೀ ಪುರಸ್ಕಾರ ಲಭಿಸಿದೆ.

ಎಚ್.ವಿ.ಹಂದೆ ಅವರು ವೃತ್ತಿಯಲ್ಲಿ ವಕೀಲರಾಗಿದ್ದು, ಬ್ರಿಟಿಷ್ ಸರ್ಕಾರದಲ್ಲಿ ಅಧಿಕಾರಿಯಾಗಿ ಗುರುತಿಸಿಕೊಂಡಿದ್ದ ಮಾದಪ್ಪ ಹಂದೆ ಅವರ ಪುತ್ರ.

ಎಚ್.ವಿ.ಹಂದೆ ಅವರು ತಮಿಳುನಾಡಿನಲ್ಲಿ ಎಂ.ಜಿ. ರಾಮಚಂದ್ರನ್ ಅವರು ಮುಖ್ಯಮಂತ್ರಿ ಆಗಿದ್ದಾಗ ಆರೋಗ್ಯ ಸಚಿವರಾಗಿ ಕರ್ತವ್ಯ ಸಲ್ಲಿಸಿದ್ದರು. ಮಂಗಳೂರು, ಚೆನ್ನೈ, ಕೊಯಮುತ್ತೂರಿನಲ್ಲಿ ಉನ್ನತ ವ್ಯಾಸಂಗ ಮುಗಿಸಿದ ಅವರು ಚೆನ್ನೈಯಲ್ಲಿ ಹಂದೆ ಆಸ್ಪತ್ರೆ ಸ್ಥಾಪಿಸಿದರು. ರಾಜಕೀಯದಲ್ಲಿ ಕುಶಲತೆ ಸಾಧಿಸಿದ ಅವರು ಮುಖ್ಯಮಂತ್ರಿ ಎಂ.ಜಿ.ಆರ್. ಅವರ ಅನಾರೋಗ್ಯ ಸಂದರ್ಭದಲ್ಲಿ ಸರ್ಕಾರ ಮುನ್ನಡೆಸಿದವರು. ‘ಕಂಬ ರಾಮಾಯಣ’ವನ್ನು ಇಂಗ್ಲಿಷ್, ತಮಿಳಿಗೆ ಭಾಷಾಂತರಿಸಿದ ಹಂದೆ ಅವರು ಸಾಹಿತ್ಯ ವಲಯದಲ್ಲಿಯೂ ಗುರುತಿಸಿಕೊಂಡವರು.

ಸಾಲಿಗ್ರಾಮ ಮಕ್ಕಳ ಮೇಳದ ಸ್ಥಾಪಕ ಎಚ್. ಶ್ರೀಧರ ಹಂದೆ ಪ್ರತಿಕ್ರಿಯೆ ನೀಡಿ, ಕಲೆ, ಸಾಹಿತ್ಯ, ಸಾಂಸ್ಕೃತಿಕ, ರಾಜಕೀಯ, ಸಾಮಾಜಿಕ, ಕೃಷಿ ಮೊದಲಾದ ಕ್ಷೇತ್ರಗಳಲ್ಲಿ ಗುರುತಿಸಿಕೊಂಡ ಹಿರಿಯ ಸಹೋದರ ಎಚ್.ವಿ.ಹಂದೆ ಅವರು ಪದ್ಮಶ್ರೀಗೆ ಭಾಜನರಾಗಿರುವುದು ಊರಿಗೆ ಹೆಮ್ಮೆಯ ಸಂಗತಿ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.