ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಲೂರು ಗ್ರಾಮ ಪಂಚಾಯಿತಿ: ಕಸ ಎಸೆದ ವ್ಯಕ್ತಿಗೆ ₹5 ಸಾವಿರ ದಂಡ

Last Updated 20 ಅಕ್ಟೋಬರ್ 2021, 5:24 IST
ಅಕ್ಷರ ಗಾತ್ರ

ಪಡುಬಿದ್ರಿ: ಕಂಪೆನಿಯೊಂದರ ಕಸವನ್ನು ಖಾಸಗಿ ಜಾಗದಲ್ಲಿ ಸುರಿದ ವ್ಯಕ್ತಿಗೆಎಲ್ಲೂರು ಗ್ರಾಮ ಪಂಚಾಯಿತಿಯು ಎರಡು ದಿನದೊಳಗೆ ತೆರವುಗೊಳಿಸಲು ಮತ್ತು ₹5 ಸಾವಿರ ದಂಡ ಪಾವತಿಸಲು ಆದೇಶಿಸಿದೆ. ತಪ್ಪಿದಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸುವ ಎಚ್ಚರಿಕೆ ನೀಡಿದೆ.

ಎಲ್ಲೂರು ಗ್ರಾಮ ಪಂಚಾಯಿತಿ ಸದಸ್ಯ ರವಿರಾಜ್‌ ಅವರ ಪಟ್ಟಾ ಜಾಗಕ್ಕೆ 2 ಲೋಡ್ ಕಸವನ್ನು ಸುರಿಯಲಾಗಿತ್ತು. ಈ ಬಗ್ಗೆ ಮಾಹಿತಿ ಕಲೆಹಾಕಿದಾಗ ಇದನ್ನು ಬೆಳಪುವಿನ ರಝಾಕ್ ಸುರಿದಿರುವುದು ಬೆಳಕಿಗೆ ಬಂತು.

ಇನ್ನಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾರ್ಯಾಚರಿಸುತ್ತಿರುವ ಬ್ರೈಟ್ ಕಂಪನಿ ಘನ ತ್ಯಾಜ್ಯವನ್ನು ತೆರವುಗೊಳಿಸಲು ಬೆಳಪುವಿನ ರಝಾಕ್ ಅವರಿಗೆ ಗುತ್ತಿಗೆ ನೀಡಿದೆ. ಗುತ್ತಿಗೆ ಪಡೆದ ರಝಾಕ್ ಆ ಕಸವನ್ನು ಖಾಲಿ ಜಾಗದಲ್ಲಿ ಸುರಿದು ಹೋಗಿದ್ದರು. ಎಲ್ಲೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಜಯಂತ್ ಕುಮಾರ್ ಕಸವನ್ನು ನೀಡಿದ ಕಂಪನಿಯ ಅಧಿಕಾರಿಗಳನ್ನು ಮತ್ತು ಕಸ ಸುರಿದ ರಝಾಕ್‌ ಅವರನ್ನು ಸ್ಥಳಕ್ಕೆ ಕರೆಯಿಸಿ ₹5 ಸಾವಿರ ದಂಡ ವಿಧಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT