ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಎಂಸಿಯಲ್ಲಿ ಯಶಸ್ವಿ ಎಂಡೊಸ್ಕೊಪಿ ಸ್ಪಾಂಜ್ ಚಿಕಿತ್ಸೆ

Last Updated 6 ಅಕ್ಟೋಬರ್ 2022, 14:18 IST
ಅಕ್ಷರ ಗಾತ್ರ

ಉಡುಪಿ: ಮಣಿಪಾಲದ ಕಸ್ತೂರಬಾ ಆಸ್ಪತ್ರೆಯಲ್ಲಿ ಮೊದಲ ಬಾರಿಗೆ ಅನ್ನನಾಳದ ರಂಧ್ರಕ್ಕೆ ಮತ್ತು ಅನಾಸ್ಟೊಮೊಟಿಕ್ ಸೋರಿಕೆ ಪ್ರಕ್ರಿಯೆಗೆ ಅಪರೂಪದ ಎಂಡೋಸ್ಕೋಪಿ ಸ್ಪಾಂಜ್ (ಎಂಡೋವಾಕ್) ಚಿಕಿತ್ಸೆಯನ್ನು ಯಶಸ್ವಿಯಾಗಿ ನೆರವೇರಿಸಲಾಗಿದೆ.

ಆಸ್ಪತ್ರೆಯ ಗ್ಯಾಸ್ಟ್ರೋ ಎಂಟರಾಲಜಿ ಮತ್ತು ಹೆಪಟಾಲಜಿ ವಿಭಾಗವು ರಾಜ್ಯದಲ್ಲಿ ಮೊದಲ ಬಾರಿಗೆ ಅಪರೂಪದ ಎಂಡೋಸ್ಕೋಪಿ ಸ್ಪಾಂಜ್ ಚಿಕಿತ್ಸೆ ನಡೆಸಿದೆ.

ವಿವರ:

51 ವರ್ಷದ ವ್ಯಕ್ತಿಗೆ ಅನ್ನನಾಳದ ಕ್ಯಾನ್ಸರ್ ಇರುವುದು ಪರೀಕ್ಷೆಯಲ್ಲಿ ಪತ್ತೆಯಾದ ನಂತರ ಶಸ್ತ್ರಚಿಕಿತ್ಸೆ ನಡೆಸಿ ಕೀಮೋಥೆರಪಿ ನೀಡಲಾಗಿತ್ತು. ವಾರದ ನಂತರ ರೋಗಿಯಲ್ಲಿ ಅನಾಸ್ಟೊಮೊಟಿಕ್ ಡಿಹಿಸೆನ್ಸ್‌ನೊಂದಿಗೆ ಮೆಡಿಯಾಸ್ಟಿನಿಟಿಸ್ ಸಮಸ್ಯೆ ಕಾಣಿಸಿಕೊಂಡಿತು.

ಈ ಸಮಸ್ಯೆ ಸರಿಪಡಿಸಲು ವೈದ್ಯರು ಮತ್ತೊಂದು ಶಸ್ತ್ರಚಿಕಿತ್ಸೆಯ ಅವಶ್ಯಕತೆಯ ಬಗ್ಗೆ ಆಲೋಚಿಸಿದ್ದರು. ಆದರೆ, ರೋಗಿಯ ಸ್ಥಿತಿ ಸರಿಯಾಗಿಲ್ಲದ ಕಾರಣ ಶಸ್ತ್ರಚಿಕಿತ್ಸೆ ಮಾಡುವುದು ಕಷ್ಟವಾಗಿತ್ತು. ಗ್ಯಾಸ್ಟ್ರೋಎಂಟರಾಲಜಿ ಮತ್ತು ಹೆಪಟಾಲಜಿ ವಿಭಾಗದ ಮುಖ್ಯಸ್ಥ ಡಾ.ಶಿರನ್ ಶೆಟ್ಟಿ ಮತ್ತು ಡಾ.ಬಾಲಾಜಿ, ಸರ್ಜಿಕಲ್ ಆಂಕೊಲಾಜಿ ವಿಭಾಗದ ಮುಖ್ಯಸ್ಥ ಡಾ.ನವೀನ ಕುಮಾರ್, ಪ್ಲಾಸ್ಟಿಕ್ ಸರ್ಜರಿ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಜೋಸೆಫ್ ಥಾಮಸ್ ವೈದ್ಯರ ತಂಡವು ರೋಗಿಗೆ ಎಂಡೋಸ್ಪಾಂಜ್/ವ್ಯಾಕ್ಯೂಮ್ ಥೆರಪಿ ಎಂಬ ನವೀನ ಚಿಕಿತ್ಸೆ ನೀಡಲು ನಿರ್ಧರಿಸಿತು.

ಅದರಂತೆ ಎಂಡೋಸ್ಕೋಪಿಯ ಮೂಲಕ ಸ್ಪಾಂಜ್ ಅನ್ನು ಮೆಡಿಯಾಸ್ಟಿನಮ್ ಕುಳಿಯಲ್ಲಿ ಇರಿಸಲಾಗಿದ್ದು, ಯಾವುದೇ ಯಾವುದೇ ಶಸ್ತ್ರಚಿಕಿತ್ಸೆಯಿಲ್ಲದೆ ದೋಷ ಸರಿಪಡಿಸಲು ಸಾದ್ಯವಾಗಿದೆ. ರೋಗಿಯು ಚೇತರಿಸಿಕೊಂಡಿದ್ದು ಬಾಯಿಯ ಮೂಲಕ ಆಹಾರ ತಿನ್ನಲು ಸಾಧ್ಯವಾಗಿದೆ ಎಂದು ಡಾ.ಶಿರನ್ ಶೆಟ್ಟಿ ತಿಳಿಸಿದ್ದಾರೆ.

ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ ಶೆಟ್ಟಿ ಅಪರೂಪದ ಚಿಕಿತ್ಸಾ ವಿಧಾನವನ್ನು ಯಶಸ್ವಿಯಾಗಿ ನಿರ್ವಹಿಸಿದ ತಂಡಕ್ಕೆ ಅಭಿನಂದಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT