ಶುಕ್ರವಾರ, ಸೆಪ್ಟೆಂಬರ್ 17, 2021
30 °C

ಉಡುಪಿ: ದೈತ್ಯ ತೊರಕೆ ಮೀನು ಬಲೆಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಡುಪಿ: ಸಮುದ್ರದಲ್ಲಿ ಮೀನುಗಾರರ ಬಲೆಗೆ ದೈತ್ಯ ತೊರಕೆ ಜಾತಿಯ ಮೀನು ಬಿದ್ದಿದೆ. ಮೀನು ಸುಮಾರು 1 ಟನ್‌ಗೂ ಹೆಚ್ಚಿನ ತೂಕ ಇದೆ ಎನ್ನಲಾಗಿದೆ.

ಈಚೆಗೆ ಮಿಥುನ್ ಕುಂದರ್ ಮಾಲೀಕತ್ವದ ದಿವ್ಯಾಂಶಿ ಹೆಸರಿನ ಬೋಟು ಮಲ್ಪೆ ಬಂದರಿನಿಂದ ಆಳ ಸಮುದ್ರ ಮೀನುಗಾರಿಕೆಗೆ ತೆರಳಿತ್ತು. ಈ ವೇಳೆ ಮೀನುಗಾರರು ಬೀಸಿದ ಬಲೆಗೆ ದೊಡ್ಡ ತೊರಕೆ ಮೀನು ಬಿದ್ದಿದೆ. ಅಪರೂಪಕ್ಕೊಮ್ಮೆ ಬೃಹತ್ ಗಾತ್ರದ ಮೀನುಗಳು ಬಲೆಗೆ ಸಿಲುಕುತ್ತವೆ ಎಂದು ಮೀನುಗಾರರು ತಿಳಿಸಿದ್ದಾರೆ.

ದೈತ್ಯ ಮೀನನ್ನು ಬೋಟಿನಿಂದ ದಡಕ್ಕೆ ಎಳೆಯಲು ಹರಸಾಹಸ ಪಡಬೇಕಾಯಿತು. ಕೊನೆಗೆ ಕ್ರೇನ್ ಸಹಾಯದಿಂದ ಎತ್ತಿ ಮಲ್ಪೆ ಬಂದರಿಗೆ ಹಾಕಲಾಯಿತು. ಗಜಗಾತ್ರದ ಮೀನು ನೋಡಲು ಬಂದರಿನಲ್ಲಿ ಹೆಚ್ಚು ಜನರು ಸೇರಿದ್ದರು. ಮೀನಿನ ಬೆಲೆ ಅಂದಾಜು ₹ 60,000 ಇರಬಹುದು ಎನ್ನಲಾಗಿದೆ. ಮೀನನ್ನು ಉಡುಪಿ ಮಾರುಕಟ್ಟೆಗೆ ಸಾಗಿಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು