ಉಡುಪಿ: ಮಲ್ಪೆ ಪರಿಸರದ ಹೋಟೆಲ್‌ವೊಂದರಲ್ಲಿ ಈಚೆಗೆ ಕರಾವಳಿಯಲ್ಲಿ ತೀರಾ ಅಪರೂಪದ ಗೋಲ್ಡನ್ ಟ್ರೀ ಸ್ನೇಕ್ (ಹಾರುವ ಹಾವು) ಪತ್ತೆಯಾಗಿದೆ.

ಈ ಸಂಬಂಧ ಪ್ರಜಾವಾಣಿ ಜತೆ ಮಾತನಾಡಿದ ಉರಗ ತಜ್ಞ ಗುರುರಾಜ ಸನೀಲ್ ‘ಪಶ್ಚಿಮಘಟ್ಟದ ದಟ್ಟಕಾಡಿನಲ್ಲಿ ಹಾರುವ ಹಾವು ಹೆಚ್ಚಾಗಿ ಕಂಡುಬರುತ್ತವೆ. ಕರಾವಳಿಯಲ್ಲಿ ತೀರಾ ಅಪರೂಪಕ್ಕೆ ಕಾಣಿಸಿಕೊಳ್ಳುತ್ತದೆ. ಬಹುಶಃ ಮಲೆನಾಡಿನಿಂದ ಸರಬರಾಜಾಗುವ ತರಕಾರಿ ವಾಹನದಲ್ಲಿ ಹಾವು ಕರಾವಳಿ ಸೇರಿರಬಹುದು ಎಂದು ಸಂಶಯ ವ್ಯಕ್ತಪಡಿಸಿದರು.

ಗೋಲ್ಡನ್ ಟ್ರೀ ಸ್ನೇಕ್ ಹೆಸರೇ ಹೇಳುವಂತೆ ಮರಗಳ ಮೇಲೆ ವಾಸಮಾಡುವ ಹಾವು. ಹಲ್ಲಿ, ಓತಿಕ್ಯಾತ, ಪಕ್ಷಿಗಳ ಮೊಟ್ಟೆಗಳನ್ನು ತಿಂದು ಇವು ಜೀವಿಸುತ್ತವೆ. ಹಾರುವುದು ಎಂದರೆ ಪಕ್ಷಿಯಂತೆ ಹಾವು ಹಾರುವುದಿಲ್ಲ. ಮರದಿಂದ ಮರಕ್ಕೆ ಹಾರುತ್ತವೆ ಎಂದು ಸನೀಲ್ ಮಾಹಿತಿ ನೀಡಿದರು.

ಬಣ್ಣಬಣ್ಣಗಳಿಂದ ಕೂಡಿರುವ ಸುಂದರವಾದ ಈ ಹಾವು ವಿಷಕಾರಿ ಅಲ್ಲ. ಬಹಳಷ್ಟು ಜನರು ಬಣ್ಣದ ಹಾವು ನೋಡಿ, ವಿಷಕಾರಿ, ಕನ್ನಡಿ ಹಾವು ಎಂದೇ ಭಾವಿಸಿ ಸಾಯಿಸುತ್ತಾರೆ. ಇದು ಬಹಳ ಅಪರೂಪದ ಉರಗ ಜಾತಿಯದ್ದು ಎಂದು ತಿಳಿಸಿದರು.

ಮಲ್ಪೆಯ ಹೋಟೆಲ್‌ಗೆ ಪೂರೈಕೆಯಾಗಿದ್ದ ತರಕಾರಿ ಮಧ್ಯೆ ಈ ಹಾವು ಕಾಣಿಸಿಕೊಂಡಿದೆ. ಹಾವು ಹಿಡಿಯುವ ಬಾಬು ಕೊಳ ಎಂಬುವರು ಕರೆಮಾಡಿ ವಿಚಿತ್ರ ಬಣ್ಣದ ಹಾವು ಹಿಡಿದಿದ್ದು, ಹೆಚ್ಚಿನ ಮಾಹಿತಿ ಕೋರಿದರು. ಅದರಂತೆ ತೆರಳಿ ಪರಿಶೀಲಿಸಿದಾಗ ಇದು ಹಾರುವ ಹಾವು ಎಂಬುದು ತಿಳಿಯಿತು. ಬಳಿಕ ಅದನ್ನು ಪಶ್ಚಿಮ ಘಟ್ಟಕ್ಕೆ ಬಿಡಲಾಯಿತು ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.