ಶನಿವಾರ, 22 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಪಿಎಸ್‌ಐ ನೇಮಕಾತಿ ಹಗರಣದ ವಾಸನೆ ಬಂದಿತ್ತು: ಭಾಸ್ಕರ್ ರಾವ್

Last Updated 26 ಜುಲೈ 2022, 12:25 IST
ಅಕ್ಷರ ಗಾತ್ರ

ಉಡುಪಿ: ಪೊಲೀಸ್ ಇಲಾಖೆಯಲ್ಲಿದ್ದಾಗಲೇ ಪಿಎಸ್‌ಐ ಹಗರಣದ ವಾಸನೆ ಬಂದಿತ್ತು ಎಂದು ಮಾಜಿ ಎಡಿಜಿಪಿ ಹಾಗೂ ಆಪ್‌ ರಾಜ್ಯ ಘಟಕದ ಉಪಾಧ್ಯಕ್ಷ ಭಾಸ್ಕರ್ ರಾವ್‌ ಹೇಳಿದರು.

ಮಂಗಳವಾರ ಆಪ್ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿ, ಪಿಎಸ್‌ಐ ಅಕ್ರಮ ನೇಮಕಾತಿ ಪ್ರಕರಣದಲ್ಲಿ ಸಿಕ್ಕಿಬಿದ್ದಿರುವ ಅಮೃತ್‌ ಪೌಲ್‌ ಆಗಾಗ ಮುಖ್ಯಮಂತ್ರಿಗಳ ಮನೆಯ ಬಳಿ ಸುಳಿದಾಡುತ್ತಿರುವುದನ್ನು ಗಮನಿಸಿ ಪ್ರಶ್ನಿಸಿದ್ದೆ. ಬೆಂಗಳೂರು ಪೊಲೀಸ್ ಕಮಿಷನರ್ ಆಗಿ ಒಂದು ವರ್ಷ ಮುಗಿಯುವಷ್ಟರಲ್ಲಿ ಅಮೃತ್ ಪೌಲ್ ಮುಂದಿನ ಕಮಿಷನರ್‌ ಆಗಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು.

‘1995ರಐಪಿಎಸ್‌ಬ್ಯಾಚ್‌ನಅಧಿಕಾರಿಯಾಗಿರುವಅಮೃತ್ಪೌಲ್‌ಹಿರಿಯಅಧಿಕಾರಿಗಳನ್ನೆಲ್ಲ ಹಿಂದಿಕ್ಕಿ ಹೇಗೆ ಕಮಿಷನರ್ ಹುದ್ದೆಗೇರಲಿದ್ದಾರೆ ಎಂದು ಅಚ್ಚರಿಯಾಗಿತ್ತು. ನಂತರ ಪಿಎಸ್‌ಐ ನೇಮಕಾತಿ ಹಗರಣದಲ್ಲಿ ಅಮೃತ್ ಪೌಲ್ ಜೈಲು ಸೇರಿದಾಗ ಅನುಮಾನಗಳು ಸ್ಪಷ್ಟವಾಯಿತು ಭಾಸ್ಕರ್ ರಾವ್ ಹೇಳಿದರು.

ಪಿಎಸ್‌ಐ ನೇಮಕಾತಿ ಪ್ರಕ್ರಿಯೆ ರದ್ದುಗೊಳಿಸಿ ಹೊಸದಾಗಿ ಪರೀಕ್ಷೆ ನಡೆಯಬೇಕು. ಪ್ರಕರಣದಲ್ಲಿ ಎಸಿಬಿ, ಸಿಐಡಿ ತನಿಖೆ ನಡೆಯುವುದರಲ್ಲಿ ಅರ್ಥವಿಲ್ಲ. ಮುಖ್ಯಮಂತ್ರಿ ಹಾಗೂ ಗೃಹ ಸಚಿವರು ಎಸಿಬಿ ಹಾಗೂ ಸಿಐಡಿ ತನಿಖಾಧಿಕಾರಿಗಳಾಗಿ ಯಾರನ್ನು ಬಂಧಿಸಬೇಕು, ಯಾರನ್ನು ರಕ್ಷಿಸಬೇಕು ಎಂದು ನಿರ್ಧರಿಸುತ್ತಾರೆ. ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ಪ್ರಕರಣದ ತನಿಖೆ ನಡೆಯಬೇಕು ಎಂದರು.

ಬೆಳಗಾವಿಯ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ಕೆ.ಎಸ್‌.ಈಶ್ವರಪ್ಪ ವಿರುದ್ಧ ‘ಬಿ’ ರಿಪೋರ್ಟ್‌ ಸಲ್ಲಿಸಿರುವುದು ತನಿಖಾ ಲೋಪ. ಡೆತ್ ನೋಟ್ ಬರೆದಿಟ್ಟು ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡರೆ 306 ಸೆಕ್ಷನ್ ಅಡಿ ಸಾಮಾನ್ಯ ಆರೋಪಿಗಳನ್ನು ಬಂಧಿಸುವ ಪೊಲೀಸ್ ಇಲಾಖೆ, ಈಶ್ವರಪ್ಪ ಅವರನ್ನು ಬಂಧಿಸದಿರಲು ಕಾರಣ ಏನು ಎಂದು ಪ್ರಶ್ನಿಸಿದ ಭಾಸ್ಕರ್ ರಾವ್, ಈಶ್ವರಪ್ಪಗೆ ಮತ್ತೆ ಸಚಿವ ಸ್ಥಾನ ನೀಡಿದರೆ ರಾಜ್ಯದಾದ್ಯಂತ ಆಪ್‌ ಪಕ್ಷ ಪ್ರತಿಭಟನೆ ನಡೆಸಲಿದೆ ಎಂದು ಭಾಸ್ಕರ್ ರಾವ್ ಎಚ್ಚರಿಕೆ ನೀಡಿದರು.

ಲೋಕಾಯುಕ್ತಕ್ಕೆ ಬಲ ತುಂಬಿ ಮುಖ್ಯಮಂತ್ರಿಯನ್ನೂ ವಿಚಾರಣೆಗೊಳಪಡಿಸುವ ಅಧಿಕಾರ ನೀಡಬೇಕು. ದೆಹಲಿಯಲ್ಲಿ ಜನಲೋಕಪಾಲ್ ಮಸೂದೆ ಜಾರಿಗೆ ಕೇಂದ್ರ ಗೃಹ ಸಚಿವಾಲಯ ಅಡ್ಡಿಯಾಗಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT