ಬುಧವಾರ, 22 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಡ್‌ ಕಾನ್‌ಸ್ಟೆಬಲ್ ಸಾವು ಪ್ರಕರಣ: ಡೆತ್‌ನೋಟ್ ಪತ್ತೆ

Last Updated 1 ಮೇ 2022, 19:31 IST
ಅಕ್ಷರ ಗಾತ್ರ

ಉಡುಪಿ: ಸಶಸ್ತ್ರ ಮೀಸಲು ಪಡೆಯ ಹೆಡ್‌ ಕಾನ್‌ಸ್ಟೆಬಲ್‌ ರಾಜೇಶ್ ಕುಂದರ್‌ ಸಾವಿನ ಪ್ರಕರಣಕ್ಕೆ ತಿರುವು ಸಿಕ್ಕಿದ್ದು, ಅವರು ಬರೆದಿಟ್ಟಿದ್ದಾರೆ ಎನ್ನಲಾದ ಡೆತ್ ನೋಟ್‌ ಶನಿವಾರ ಪತ್ತೆಯಾಗಿದೆ.

‘ಆದಿ ಉಡುಪಿ ಶಾಲೆಯಲ್ಲಿ ಕರ್ತವ್ಯ ನಿರತರಾಗಿದ್ದಾಗ ಆಕಸ್ಮಿಕವಾಗಿ ಗುಂಡು ಸಿಡಿದು ರಾಜೇಶ್ ಮೃತಪಟ್ಟಿದ್ದಾರೆ’ ಎಂದು ಪ್ರಕರಣ ದಾಖಲಾಗಿತ್ತು.

‘ನನ್ನ ಸಾವಿಗೆ ಗಂಗೊಳ್ಳಿ ಠಾಣೆಯ ಪಿಎಸ್‌ಐ ನಂಜಪ್ಪ ಹಾಗೂ ಡಿಎಆರ್‌ ಎಪಿಸಿಗಳಾದ ಉಮೇಶ್‌ ಮತ್ತು ಅಶ್ಫಾಕ್‌ ಕಾರಣ’ ಎಂಬ ಉಲ್ಲೇಖಡೆತ್‌ನೋಟ್‌ನಲ್ಲಿದೆ. ಆರೋಪಿಗಳ ವಿರುದ್ಧ 306 ಆರ್‌ಡಬ್ಲ್ಯು, 34 ಐಪಿಸಿ ಅಡಿ ಪ್ರಕರಣ ದಾಖಲಾಗಿದೆ. ರಾಜೇಶ್‌ ಜತೆ ಆದಿ ಉಡುಪಿ ಶಾಲೆಯಲ್ಲಿ ಕರ್ತವ್ಯಕ್ಕೆ ನಿಯೋಜಿತಗೊಂಡಿದ್ದ ಉಡುಪಿ ಡಿಎಆರ್‌ ಘಟಕದ ಕಾನ್‌ಸ್ಟೆಬಲ್‌ ಗಣೇಶ್‌, ಡಿಎಆರ್‌ ಕಚೇರಿಯಲ್ಲಿ ಕಿಟ್‌ ಬ್ಯಾಗ್‌ನಿಂದ ಸಮವಸ್ತ್ರ, ಬೆಡ್‌ಶೀಟ್‌ ಹೊರ ತೆಗೆಯುವಾಗ ಡೆತ್‌ನೋಟ್‌ ಸಿಕ್ಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT