ಗಣೇಶೋತ್ಸವ ಸಮಿತಿ ಅಧ್ಯಕ್ಷ ಸುಕುಮಾರ ಹೆಬ್ಬಾರ್ ಅಧ್ಯಕ್ಷತೆ ವಹಿಸಿದ್ದರು. ದೇವಸ್ಥಾನದ ಪ್ರಧಾನ ಅರ್ಚಕ ವೇದಮೂರ್ತಿ ರಾಮಚಂದ್ರ ಭಟ್, ಧಾರ್ಮಿಕ ಉಪನ್ಯಾಸ ನೀಡಿದ ಕವಿ, ಬರಹಗಾರ ಶ್ರೀಕರ ಭಾರದ್ವಾಜ್, ಮಲೆಕುಡಿಯ ಸಂಘದ ಅಧ್ಯಕ್ಷ ರಾಜು ಗೌಡ, ಗಣೇಶೋತ್ಸವ ಸಮಿತಿಯ ಪೂರ್ವಾದ್ಯಕ್ಷರಾದ ನಾಗಭೂಷಣ ಹೆಬ್ಬಾರ್, ಜ್ಞಾನೇಶ್ವರ ಹೆಬ್ಬಾರ್, ಶಶಿಧರ ಹೆಬ್ಬಾರ್, ರಾಧಾಕೃಷ್ಣ ಹೆಬ್ಬಾರ್, ಕಾರ್ಯದರ್ಶಿ ಪರಮೇಶ್ವರ ಹೆಬ್ಬಾರ್, ಬಾಲಕೃಷ್ಣ ಹೆಬ್ಬಾರ್ ಪೇರಳ, ಬಾಲಚಂದ್ರ ಹೆಬ್ಬಾರ್ ಇದ್ದರು. ಸಮಿತಿಯ ಕೆ. ರಾಮಚಂದ್ರ ಭಟ್ ವರಂಗ ನಿರೂಪಿಸಿದರು. ಮುಕ್ತಾ ಹೆಬ್ಬಾರ್ ವಂದಿಸಿದರು.