ಉಡುಪಿ: ಮಹಿಳಾ ಟಿ 20 ವಿಶ್ವಕಪ್ ಜಯಿಸಿರುವ ಭಾರತ ಅಂಧ ಮಹಿಳಾ ಕ್ರಿಕೆಟ್ ತಂಡವನ್ನು ಮಣಿಪಾಲದ ಮಾಹೆಯಲ್ಲಿ ಶನಿವಾರ ಗೌರವಿಸಲಾಯಿತು.

ಮಾಹೆಯ ಸಹ ಕುಲಾಧಿಪತಿ ಡಾ. ಎಚ್.ಎಸ್. ಬಲ್ಲಾಲ್ ಮಾತನಾಡಿ, ಭಾರತದ ಅಂಧ ಮಹಿಳಾ ಕ್ರಿಕೆಟ್ ತಂಡವು ಸಾಧಿಸಿರುವ ಯಶಸ್ಸು ವ್ಯವಸ್ಥಿತ ತರಬೇತಿ ಮತ್ತು ಸ್ಪರ್ಧಾತ್ಮಕ ಅವಕಾಶಗಳನ್ನು ಒದಗಿಸುವ ದೀರ್ಘಕಾಲೀನ ಪ್ರಯತ್ನಗಳ ಫಲವಾಗಿದೆ ಎಂದು ಹೇಳಿದರು.

ಮಾಹೆ ಕುಲಪತಿ ಕುಲಪತಿ ಲೆಫ್ಟಿನೆಂಟ್ ಜನರಲ್ ಎಂ.ಡಿ. ವೆಂಕಟೇಶ್ ಮಾತನಾಡಿ, ಭಾರತ ಅಂಧ ಮಹಿಳಾ ಕ್ರಿಕೆಟ್ ತಂಡ ಪ್ರದರ್ಶಿಸಿದ ಅತ್ಯುತ್ತಮ ಕ್ರೀಡಾಸ್ಫೂರ್ತಿ, ಸಹನಶೀಲತೆ ಮತ್ತು ದೃಢಸಂಕಲ್ಪದಿಂದ ಯಶಸ್ಸು ಸಿಕ್ಕಿದೆ ಎಂದರು.

ಮಾಹೆ ಟ್ರಸ್ಟ್ನ ಟ್ರಸ್ಟಿ ವಸಂತಿ ಆರ್. ಪೈ, ಸಹಕುಲಪತಿ ಡಾ. ನಾರಾಯಣ ಸಭಾಹಿತ್, ಡಾ. ಶರತ್ ಕೆ. ರಾವ್, ರಿಜಿಸ್ಟ್ರಾರ್ ಡಾ. ಪಿ. ಗಿರಿಧರ್ ಕಿಣಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ್ ವೆಣುಗೋಪಾಲ್ ಹಾಗೂ ಮಾಹೆಯ ಅಂಗ ಸಂಸ್ಥೆಗಳ ಮುಖ್ಯಸ್ಥರ ಸಮ್ಮುಖದಲ್ಲಿ ತಂಡವನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಬ್ಯಾಂಕ್ ಆಫ್ ಬರೋಡಾ (ಕ್ರೆಡಿಟ್ ಕಾರ್ಡ್ ವಿಭಾಗ) ಬಿಡುಗಡೆ ಮಾಡಿದ ಬ್ರೈಲ್ ಸೌಲಭ್ಯ ಹೊಂದಿದ ಕಾರ್ಡ್ ಅನ್ನು ಪರಿಚಯಿಸಲಾಯಿತು.

ಮಣಿಪಾಲ್ ಕಾಲೇಜ್ ಆಫ್ ಹೆಲ್ತ್ ಪ್ರೊಫೆಷನ್ಸ್ನ ಡೀನ್ ಡಾ. ಜಿ. ಅರುಣ್ ಮಯ್ಯ ಅವರು ಸ್ವಾಗತಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.