ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಮಾತೆ ಇಸ್ಲಾಮಿ ಹಿಂದ್‌ನಿಂದ ಬಡ ಕುಟುಂಬಕ್ಕೆ ವಸತಿ

Last Updated 1 ಏಪ್ರಿಲ್ 2021, 15:02 IST
ಅಕ್ಷರ ಗಾತ್ರ

ಉಡುಪಿ: ತೋನ್ಸೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸೂರಿಲ್ಲದ ಕುಟುಂಬಗಳಿಗೆ ಮನೆಕಟ್ಟಿ ಕೊಡುವ ಕಾರ್ಯದಲ್ಲಿ ನಿರತವಾಗಿರುವ ಹೂಡೆಯ ಜಮಾತೆ ಇಸ್ಲಾಮಿ ಹಿಂದ್ ಸಂಘಟನೆ ಗುರುವಾರ 17ನೇ ಮನೆಯನ್ನು ಬಡ ಕುಟುಂಬಕ್ಕೆ ನೀಡಿತು. ಜಮಾತೆ ಇಸ್ಲಾಮಿ ಹಿಂದ್ ಮಲ್ಪೆಯ ಅಧ್ಯಕ್ಷ ರಫೀಕ್ಮನೆಯ ಕೀಲಿಗೈಯನ್ನು ಫಲನುಭವಿಗೆ ಹಸ್ತಾಂತರಿಸಿದರು.

ಕೋವಿಡ್ ಹಾಗೂ ನೆರೆಯ ಸಂದರ್ಭ ಜೆಐಎಚ್ ನೆರವು ನೀಡುತ್ತಾ ಬಂದಿದ್ದು, ಸಂಘಟನೆಯ ಹೂಡೆ ಘಟಕ ಬಡವರಿಗೆ ಮನೆ ಕಟ್ಟಿಕೊಡುವಂತಹ ಕಾರ್ಯದಲ್ಲಿ ನಿರತವಾಗಿದೆ. ಸಂಘಟನೆಯ ಕಾರ್ಯ ಸಮಾಜಕ್ಕೆ ಮಾದರಿ ಎಂದು ಶ್ಲಾಘಿಸಿದರು.

ತೋನ್ಸೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ನಿತ್ಯಾನಂದ ಕೆಮ್ಮಣ್ಣು ಮಾತನಾಡಿ, ಜಾತಿ, ಮತ, ಧರ್ಮದ ಬೇಧವಿಲ್ಲದೆ ಜಮಾತೆ ಇಸ್ಲಾಮಿ ಹಿಂದ್ ಬಡ ಕುಟುಂಬಗಳನ್ನು ಗುರುತಿಸಿ ಮನೆ ಕಟ್ಟಿಕೊಡುತ್ತಿರುವುದು ಶ್ಲಾಘನೀಯ. ಅವರ ಸಮಾಜಮುಖಿ ಕಾರ್ಯಗಳು ಮತ್ತಷ್ಟು ಮುಂದುವರಿಯಲಿ ಎಂದರು.

ಈ ಸಂದರ್ಭ ತೋನ್ಸೆ ಪಂಚಾಯಿತಿ ಕಾರ್ಯದರ್ಶಿ ದಿನಕರ್, ತಾಲ್ಲೂಕು ಪಂಚಾಯಿತಿ ಸದಸ್ಯೆ ಸುಲೋಚನ, ಸತೀಶ್, ಯಶೋಧ, ಉಸ್ತಾದ್ ಸಾದೀಕ್, ಜಮಾತೆ ಇಸ್ಲಾಮಿ ಹಿಂದ್ ಹೂಡೆ ಅಧ್ಯಕ್ಷರಾದ ಅಬ್ದುಲ್ ಖಾದೀರ್ ಮೊಯಿದಿನ್ ಇದ್ದರು.

ತೋನ್ಸೆ ಗ್ರಾಮ ಪಂಚಾಯಿತಿ ಸದಸ್ಯ ಇದ್ರಿಸ್ ಹೂಡೆ, ಜಮೀಲಾ, ವಿಜಯ್, ಮುಮ್ತಾಜ್‌, ಜೆಐಎಚ್ ಹೂಡೆ ಕಾರ್ಯದರ್ಶಿ ಹಸನ್ ಕೋಡಿಬೆಂಗ್ರೆ ಇದ್ದರು. ಆದಿಲ್ ಹೂಡೆ ಪ್ರಸ್ತಾವಿಕವಾಗಿ ಮಾತನಾಡಿದರು. ಮುಫೀದ್ ಹೂಡೆ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT