ಕಾರ್ಕಳ: ‘ವಿದ್ಯಾರ್ಥಿ ಜೀವನದಲ್ಲಿ ಶಿಸ್ತುಬದ್ಧವಾದ ನಡೆ-ನಡವಳಿಕೆ ಇಟ್ಟುಕೊಂಡವರು ಶೈಕ್ಷಣಿಕ ಕ್ಷೇತ್ರದಲಿ ಸಾಧಕರಾಗಿ ಹೊರಹೊಮ್ಮಲು ಸಾಧ್ಯ’ ಎಂದು ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಯ ಹಳೆವಿದ್ಯಾರ್ಥಿ ಮನ್ವಿತ್ ಪ್ರಭು ಹೇಳಿದರು.

ಸಂಸ್ಥೆಯಲ್ಲಿ ಈಚೆಗೆ ಆಯೋಜಿಸಿದ್ದ ಜೆಇಇ ಮೈನ್ ಬಿ.ಟೆಕ್ ಮೊದಲ ಹಂತದ ಫಲಿತಾಂಶದ ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಮಾತನಾಡಿ, ಶಿಕ್ಷಣಕ್ಕೆ ಪೂರಕವಾದ ವಾತಾವರಣವು ಜ್ಞಾನಸುಧಾ ಸಂಸ್ಥೆಯಲ್ಲಿದೆ. ಸಂಸ್ಥೆಯಲ್ಲಿ ಅತ್ಯುತ್ತಮ ಫಲಿತಾಂಶಗಳು ಹೊರಬರುತ್ತಿವೆ ಎಂದರು.

ಅಜೆಕಾರು ಪದ್ಮಗೋಪಾಲ್ ಎಜುಕೇಶನ್ ಟ್ರಸ್ಟ್ನ ಅಧ್ಯಕ್ಷ ಡಾ.ಸುಧಾಕರ ಶೆಟ್ಟಿ ಮಾತನಾಡಿ, ಪ್ರಾಮಾಣಿಕ ಪರಿಶ್ರಮದಿಂದ ಪಡೆದ ಫಲಿತಾಂಶಕ್ಕೆ ನ್ಯಾಯವನ್ನು ಕೊಡುವ ಜವಾಬ್ದಾರಿ ನಾವು ಮಾಡಿದ್ದೇವೆ ಎಂಬ ತೃಪ್ತಿ ನಮಗಿದೆ. ಎಷ್ಟೇ ಅತ್ಯುತ್ತಮ ಅಂಕ ಗಳಿಸಿಕೊಂಡರೂ ತಂದೆ–ತಾಯಿ ಗುರುಹಿರಿಯರನ್ನು ಗೌರವಿಸಿ ಬಾಳಿದರೆ ನಿಜವಾದ ಸಾಧಕನ ವ್ಯಕ್ತಿತ್ವಕ್ಕೆ ಗೌರವ ಬರಲು ಸಾಧ್ಯ ಎಂದರು

ಎಜುಕೇಶನ್ ಟ್ರಸ್ಟಿನ ವತಿಯಿಂದ ಸಂಸ್ಥೆಯ ಜೆಇಇ ಮೇನ್ ಫಲಿತಾಂಶದಲ್ಲಿ 97ಕ್ಕಿಂತ ಅಧಿಕ ಪರ್ಸಂಟೈಲ್ ಗಳಿಸಿದ ಸಾಧಕ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. 99.90 ಪರ್ಸಂಟೈಲ್ ಪಡೆದ ಕನಿಷ್ಕ್ ಅಮೀನ್ ಅವರಿಗೆ ₹ 1 ಲಕ್ಷ, 99.50 ಪರ್ಸಂಟೈಲ್ ಪಡೆದ ತುಷಾರ್ ಎ ಶೆಟ್ಟಿಗೆ ₹25 ಸಾವಿರ, 99.42 ಪರ್ಸಂಟೈಲ್ ಪಡೆದ ನಿಶಾನ್ ಎನ್ ಸಾಲ್ಯಾನ್ ಹಾಗೂ 99.23 ಪರ್ಸಂಟೈಲ್ ಪಡೆದ ತೇಜಸ್ ನಾಯಕ್ ಅವರಿಗೆ ತಲಾ ₹15 ಸಾವಿರ ನಗದು ನೀಡಿ ಪುರಸ್ಕರಿಸಲಾಯಿತು.

98ಕ್ಕಿಂತ ಅಧಿಕ ಪರ್ಸಂಟೈಲ್ ಪಡೆದ ಮನೋಜ್ ಎಂ, ವೈಷ್ಣವಿ ಕುಲಕರ್ಣಿ, ಸಂಜನಾ ಬಿ.ಎ, ಸಾಯಿರಾಘವೇಂದ್ರ ಬಿ, ಮಯೂರ್ ವಿ ಗೌಡ, ವರುಣ್ ಜೆ, ಜೀವನ್ ಎನ್ ಬಿ, ದಿಗಂತ್ ಎಸ್, ಎನ್.ಎಸ್.ವಿವೇಕ್ ಅವರಿಗೆ ತಲಾ ₹ ಒಂದು ಸಾವಿರ ಹಾಗೂ 97ಕ್ಕಿಂತ ಅಧಿಕ ಪರ್ಸಂಟೈಲ್ ಪಡೆದ 21 ವಿದ್ಯಾರ್ಥಿಗಳಿಗೆ ತಲಾ ₹500 ನಗದು ನೀಡಲಾಯಿತು. ಒಟ್ಟು ₹1.74.ಲಕ್ಷದ ಪ್ರೋತ್ಸಾಹಧನ ವಿತರಿಸಲಾಯಿತು.

ಸಂಸ್ಥೆಯ ಟ್ರಸ್ಟಿ ವಿದ್ಯಾವತಿ ಸುಧಾಕರ್ ಶೆಟ್ಟಿ, ಅನಿಲ್ ಕುಮಾರ್ ಜೈನ್, ಗಣಪತಿ ಪೈ, ದೇವೇಂದ್ರ ನಾಯಕ್, ತ್ರಿವಿಕ್ರಮ ಕಿಣಿ, ಸಿಇಒ ದಿನೇಶ್ ಎಂ ಕೊಡವೂರ್, ಪಿಆರ್ಒ ಜ್ಯೋತಿ ಪದ್ಮನಾಭ ಭಂಡಿ, ಉಪಪ್ರಾಂಶುಪಾಲರಾದ ಸಾಹಿತ್ಯ ಹಾಗೂ ಉಷಾ ರಾವ್ ಯು, ಡೀನ್ ಅಕಾಡೆಮಿಕ್ಸ್ ಡಾ. ಮಿಥುನ್ ಯು, ಎಂಟ್ರೆನ್ಸ್ ಅಕಾಡೆಮಿಯ ಸಂಯೋಜಕ ಸಂದೀಪ, ಡೀನ್ ಸ್ಟೂಡೆಂಟ್ಸ್ ಅಪೈರ್ ಶಕುಂತಲಾ ಎಂ.ಸುವರ್ಣ ಉಪಸ್ಥಿತರಿದ್ದರು.

ಆಂಗ್ಲಭಾಷಾ ವಿಭಾಗದ ಮುಖ್ಯಸ್ಥೆ ಸಂಗೀತಾ ಕುಲಾಲ್ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.