ಪಡುಬಿದ್ರಿ: ಜಗತ್ತಿಗೆ ಮಾದರಿಯಾದ ಸಂವಿಧಾನ ಹೊಂದಿರುವ ಭಾರತದ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ವ್ಯವಸ್ಥೆ ಪ್ರಮುಖವಾಗಿದೆ. ಆಡಳಿತ ಹಾಗೂ ನ್ಯಾಯಾಂಗ ವಿಭಾಗದಲ್ಲಿ ಸಾಧನೆ ಮಾಡಬೇಕೆಂಬ ಆಸೆ ಎಳವೆಯಲ್ಲಿಯೇ ಹೊಂದಿದ್ದೆ. ನ್ಯಾಯಾಧೀಶೆಯಾಗಿ ಪ್ರಾಮಾಣಿಕತೆಯಿಂದ ಶಕ್ತಿಮೀರಿ ಸಮಾಜಕ್ಕೆ ಸೇವೆ ಸಲ್ಲಿ ಯುವ ನ್ಯಾಯಾಧೀಶ ಪಲ್ಲವಿ ಹೇಳಿದರು.

ತೆಂಕ ಎರ್ಮಾಳು ಶ್ರೀಆದಿಶಕ್ತಿ ವೀರಭದ್ರ ದೇವಸ್ಥಾನದ ವಾರ್ಷಿಕ ಮಹೋತ್ಸವ ಅಂಗವಾಗಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.

ಆಡಳಿತ ಮಂಡಳಿ ಅಧ್ಯಕ್ಷ ನಾರಾಯಣ ಶೆಟ್ಟಿಗಾರ್, ಮುಂಬೈ ಸಮಿತಿ ಅಧ್ಯಕ್ಷ ಚಂದ್ರಶೇಖರ ಶೆಟ್ಟಿಗಾರ್, ಘನಶ್ಯಾಮ್ ಶೆಟ್ಟಿಗಾರ್, ಮೋಹನ್ದಾಸ್ ಶೆಟ್ಟಿ, ಗುಣಪಾಲ್ ಶೆಟ್ಟಿ, ಆಡಳಿತ ಮಂಡಳಿ ಉಪಾಧ್ಯಕ್ಷ ಶಶಿಕಾಂತ ಜೆ ಶೆಟ್ಟಿಗಾರ್, ಕೋಶಾಧಿಕಾರಿ ಶ್ರೀಮೂರ್ತಿ ಶೆಟ್ಟಿಗಾರ್, ಗುರಿಕಾರರುಗಳಾದ ವಿವೇಕ್ ಶೆಟ್ಟಿಗಾರ್ ಇನ್ನ, ವಾಮನ್ ಶೆಟ್ಟಿಗಾರ್, ವಿಜಯ್ ಶೆಟ್ಟಿಗಾರ್, ದೈವಸ್ಥಾನದ ಅರ್ಚಕ ಉದಯ ಶೆಟ್ಟಿಗಾರ್, ಹಿರಿಯರಾದ ಭೋಜ ಶೆಟ್ಟಿಗಾರ್, ಯುವ ವೇದಿಕೆ ಅಧ್ಯಕ್ಷ ನಿತಿನ್ ಶೆಟ್ಟಿಗಾರ್ ಉಪಸ್ಥಿತರಿದ್ದರು. ಜ್ಯೋತಿ ಕಾರ್ಯಕ್ರಮ ನಿರೂಪಿಸಿದರು. ವಂದನಾ ವಿವೇಕ್ ವಂದಿಸಿದರು.

ವಾರ್ಷಿಕ ಮಹೋತ್ಸವ ಸಂಪನ್ನ
ತೆಂಕ ಎರ್ಮಾಳು ಆದಿಶಕ್ತಿ ವೀರಭದ್ರ ದೇವಸ್ಥಾನದ ವಾರ್ಷಿಕ ಮಹೋತ್ಸವ ದೇವಳದ ತಂತ್ರಿ ವೇ.ಮೂ.ಕಂಬ್ಳಕಟ್ಟ ರಾಧಾಕೃಷ್ಣ ಉಪಾಧ್ಯಾಯ ಮಾರ್ಗದರ್ಶನದಲ್ಲಿ ಪ್ರಧಾನ ಅರ್ಚಕರಾದ ಗಣಪತಿ ಭಟ್ ಮತ್ತು ಗುರುರಾಜ್ ಭಟ್ ಸಹಭಾಗಿತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಸಂಪನ್ನಗೊಂಡಿತು. ವಿವಿಧ ಧಾರ್ಮಿಕ ಕಾರ್ಯಕ್ರಮ, ಮಹಾಪೂಜೆ, ಎರ್ಮಾಳು ಶ್ರೀನಿಧಿ ಮಹಿಳಾ ಭಜನಾ ತಂಡದಿಂದ ಭಜನಾ ಕಾರ್ಯಕ್ರಮ, ರಾತ್ರಿ ಉತ್ಸವಬಲಿ, ರಂಗಪೂಜೆ, ಭೂತಬಲಿ, ಪರಿವಾರ ದೈವಗಳಿಗೆ ತಂಬಿಲ ಸೇವೆ ನೆರವೇರಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.