ಭಾನುವಾರ, ಡಿಸೆಂಬರ್ 6, 2020
19 °C
ಚಿನ್ನದ ಪಲ್ಲಕ್ಕಿಯಲ್ಲಿ ಕದಿರು ಇರಿಸಿ ಮೆರವಣಿಗೆ

ಕೃಷ್ಣಮಠದಲ್ಲಿ ಕದಿರು ಕಟ್ಟುವ ಸಂಭ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ‌: ವಿಜಯದಶಮಿಯ ದಿನವಾದ ಸೋಮವಾರ ಕೃಷ್ಣ ಮಠದಲ್ಲಿ ಸಂಪ್ರದಾಯದಂತೆ ಕದಿರು ಕಟ್ಟುವ ಧಾರ್ಮಿಕ ವಿಧಿವಿಧಾನಗಳು ನೆರವೇರಿದವು.

ಸೋದೆ ಮಠದಲ್ಲಿ ಕದಿರನ್ನು ಪೂಜಿಸಿ ಚಿನ್ನದ ಪಲ್ಲಕ್ಕಿಯಲ್ಲಿ ಕದಿರು (ಭತ್ತದ ತೆನೆ) ಇರಿಸಿ ರಥಬೀದಿಯಲ್ಲಿ ಮೆರವಣಿಗೆ ನಡೆಸಲಾಯಿತು. ಬಳಿಕ ಕೃಷ್ಣನ ಗರ್ಭಗುಡಿಯ ಪೂರ್ವದ್ವಾರದ ಮೂಲಕ ಕದಿರನ್ನು ಒಳತಂದು ಪರ್ಯಾಯ ಅದಮಾರು ಈಶಪ್ರಿಯ ತೀರ್ಥರ ಉಪಸ್ಥಿತಿಯಲ್ಲಿ  ಮಠದ ಪಾರುಪತ್ಯಗಾರರಾದ ಲಕ್ಷ್ಮೀಶ ಆಚಾರ್ಯರ ನೇತೃತ್ವದಲ್ಲಿ ಪೂಜೆ ಸಲ್ಲಿಸಲಾಯಿತು. ಬಳಿಕ ಬಡಗುಮಾಳಿಗೆಯಲ್ಲಿ ಪೂಜಿಸಿ ಕದಿರು ಕಟ್ಟಲಾಯಿತು.

ನಂತರ ರಾಜಾಂಗಣದಲ್ಲಿ ಭಕ್ತರಿಗೆ ಕದಿರನ್ನು ಪ್ರಸಾದದ ರೂಪವಾಗಿ ಹಂಚಲಾಯಿತು. ಪ್ರತಿವರ್ಷ ಕದಿರು ಕಟ್ಟುವ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯುತ್ತಿತ್ತು. ಈ ವರ್ಷ ಕೋವಿಡ್‌ ಸೋಂಕು ಹರಡುವಿಕೆ ತಡೆಯಲು ಸರಳವಾಗಿ ಸಂಪ್ರದಾಯ ಪಾಲಿಸಲಾಯಿತು. ಮಠದ ವಿದ್ವಾಂಸರು ಹಾಗೂ ಸಿಬ್ಬಂದಿ ಮಾತ್ರ ಭಾಗವಹಿಸಿದ್ದರು.‌

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.