ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಾರಂತ ಥೀಂ ಪಾರ್ಕ್: ವಾರಾಂತ್ಯ ತರಗತಿ ಪುನಾರಂಭ

Published 23 ಜೂನ್ 2024, 16:09 IST
Last Updated 23 ಜೂನ್ 2024, 16:09 IST
ಅಕ್ಷರ ಗಾತ್ರ

ಕೋಟ(ಬ್ರಹ್ಮಾವರ): ‌ಇಲ್ಲಿನ ಡಾ.ಶಿವರಾಮ ಕಾರಂತ ಥೀಂ ಪಾರ್ಕ್‌ನಲ್ಲಿ ಡಾ.ಶಿವರಾಮ ಕಾರಂತ ಅನೌಪಚಾರಿಕ ಕೇಂದ್ರದಡಿ ನಡೆಯುವ ಚಿತ್ರಕಲಾ, ಯಕ್ಷಗಾನ ನೃತ್ಯ ತರಗತಿಯ ಶೈಕ್ಷಣಿಕ ವರ್ಷದ ಆರಂಭೋತ್ಸವವನ್ನು ಡಾ.ಶಿವರಾಮ ಕಾರಂತ ಪ್ರತಿಷ್ಠಾನದ ಟ್ರಸ್ಟಿ ಸುಬ್ರಾಯ ಆಚಾರ್ಯ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು, ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಇಂತಹ ತರಗತಿಗಳು ಉಪಯುಕ್ತವಾಗಿವೆ ಎಂದರು.

ಸಂಗೀತ ತರಗತಿ ಉದ್ಘಾಟಿಸಿ ಮಾತನಾಡಿದ ಕಾರಂತ ಪ್ರತಿಷ್ಠಾನದ ಟ್ರಸ್ಟಿ ಸುಶೀಲ ಸೋಮಶೇಖರ್, ‘ಮಕ್ಕಳು ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಯಲ್ಲಿ ತೊಡಗಿಸಿಕೊಂಡಾಗ ಭವಿಷ್ಯ ಉಜ್ವಲವಾಗುತ್ತದೆ’  ಎಂದರು.

ಸಂಸದ ಕೋಟ ಶ್ರೀನಿವಾಸ ಪೂಜಾರಿ, ಕಾರಂತ ಪ್ರತಿಷ್ಠಾನದ ಕಾರ್ಯದರ್ಶಿ ನರೇಂದ್ರ ಕುಮಾರ್ ಕೋಟ, ಕ್ರಿಯೇಟಿವ್ ಆರ್ಟ್‌ನ ಚಿತ್ರಕಲಾ ಶಿಕ್ಷಕ ಗಿರೀಶ ಆಚಾರ್ಯ ವಕ್ವಾಡಿ, ಯಕ್ಷಗಾನ ನೃತ್ಯ ಶಿಕ್ಷಕಿ ಸಂಗೀತ ಕಾರ್ತಟ್ಟು, ಸಂಗೀತ ಶಿಕ್ಷಕಿ ಭಾಗೇಶ್ವರಿ ಮಯ್ಯ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT