ಶುಕ್ರವಾರ, ನವೆಂಬರ್ 15, 2019
20 °C

ಬಿಜೆಪಿ–ಜೆಡಿಎಸ್‌ ಒಳ ಒಪ್ಪಂದವಾಗಿರುವುದು ನಿಜ: ಸಿದ್ದರಾಮಯ್ಯ

Published:
Updated:
ಸಿದ್ದರಾಮಯ್ಯ (ಸಂಗ್ರಹ ಚಿತ್ರ)

ಉಡುಪಿ: ಸರ್ಕಾರ ಉಳಿಸಿಕೊಳ್ಳುವ ವಿಚಾರದಲ್ಲಿ ಬಿಜೆಪಿ ಹಾಗೂ ಜೆಡಿಎಸ್‌ ನಡುವೆ ಮಾತುಕತೆಯಾಗಿರುವುದು ಸತ್ಯ. ಆದರೆ, ಒಳ ಒಪ್ಪಂದದ ನಿಯಮ, ಷರತ್ತುಗಳು ಏನು ಎಂಬುದು ಗೊತ್ತಿಲ್ಲ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ಬುಧವಾರ ಉಡುಪಿಯ ಪುರಭವನದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಯಡಿಯೂರಪ್ಪ ಸರ್ಕಾರ ಉಳಿಯಬೇಕಾದರೆ ಉಪ ಚುನಾವಣೆಯಲ್ಲಿ ಕನಿಷ್ಠ 8 ಸ್ಥಾನಗಳನ್ನು ಗೆಲ್ಲಬೇಕು. ವಿಫಲವಾದರೆ ಸರ್ಕಾರ ಬೀಳಲಿದೆ. ಈ ಸಂದರ್ಭ ಜೆಡಿಎಸ್‌ ಬೆಂಬಲ ಕೊಟ್ಟರೆ ಕೊಡಲಿ ಎಂದರು.

ಇದನ್ನೂ ಓದಿ: ಸಿದ್ದರಾಮಯ್ಯ, ಎಚ್‌ಡಿಕೆ ಅವಧಿಯ ಅವ್ಯವಹಾರದ ಕುರಿತು ತನಿಖೆಗೆ ಆದೇಶ: ವಿ.ಸೋಮಣ್ಣ

ಜೆಡಿಎಸ್‌ ನಿಜವಾಗಿಯೂ ಜಾತ್ಯತೀತ ಪಕ್ಷವಾದರೆ ಬಿಜೆಪಿಗೆ ಖಂಡಿತ ಬೆಂಬಲ ನೀಡುವುದಿಲ್ಲ. ಕೊಟ್ಟರೆ, ಪಕ್ಷದ ಜಾತ್ಯತೀತತೆಯ ಬಣ್ಣ ಬಯಲಾಗಲಿದೆ ಎಂದು ಕುಟುಕಿದರು.

ಅನರ್ಹ ಶಾಸಕರ ರಾಜೀನಾಮೆ ವಿಚಾರದಲ್ಲಿ ಯಡಿಯೂರಪ್ಪ ಆಡಿಯೋ ಪ್ರಕರಣವನ್ನು ಪರಿಗಣಿಸುವುದಾಗಿ ಸುಪ್ರೀಂಕೋರ್ಟ್‌ ಹೇಳಿದೆ. ಕಾಂಗ್ರೆಸ್‌ಗೆ ಯಾವುದೇ ಹಿನ್ನಡೆಯಾಗಿಲ್ಲ ಎಂದು ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.

ಪ್ರತಿಕ್ರಿಯಿಸಿ (+)