ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಪಿ | ಕೆಪಿಎಸ್ ಶಾಲೆಗೆ ಜಿಲ್ಲಾಧಿಕಾರಿ ಭೇಟಿ

Last Updated 2 ಜುಲೈ 2022, 4:24 IST
ಅಕ್ಷರ ಗಾತ್ರ

ಪಡುಬಿದ್ರಿ: ಸರ್‌... ಮೇಡಂ... ಆಚೆ ತರಗತಿ ಸೋರುತ್ತಿದೆ, ಕುಳಿತುಕೊಳ್ಳಲು ಆಗುತ್ತಿಲ್ಲ ಎಂದು ಎಲ್‌ಕೆಜಿ, ಯುಕೆಜಿ ಮಕ್ಕಳೆಲ್ಲಾ ಒಂದೇ ಕೊಠಡಿಯಲ್ಲಿ ಕುಳಿತುಕೊಳ್ಳುತ್ತಾರೆ. ಬೆಂಚ್‌ ಇಲ್ಲದೇ ಮಕ್ಕಳೆಲ್ಲಾ ನೆಲದಲ್ಲೇ ಕುಳಿತುಕೊಳ್ಳುತ್ತಾರೆ... ಹೀಗೆ ಮೂಲಸೌಕರ್ಯವಿಲ್ಲದೇ ಪರದಾಡುತ್ತಿರುವುದು ಪಡುಬಿದ್ರಿಯ ಕೆಪಿಎಸ್ ಶಾಲೆಯ ಮಕ್ಕಳು.

ಪಡುಬಿದ್ರಿ ಪರಿಸರದಲ್ಲಿ ಮಳೆ ಮುನ್ನೆಚ್ಚರಿಕೆಯ ಬಗ್ಗೆ ಜಿಲ್ಲಾಧಿಕಾರಿ ಕೂರ್ಮಾರಾವ್ ಪರಿಶೀಲನೆಗೆ ತೆರಳಿದ್ದರು. ಈ ವೇಳೆ ಕರ್ನಾಟಕ ಪಬ್ಲಿಕ್ ಸ್ಕೂಲ್‌ಗೆ ಭೇಟಿ ನೀಡಿದ್ದರು. ಆಗಅಲ್ಲಿನ ಶಿಕ್ಷಕಿಯರು ಶಾಲೆಯ ಪರಿ‌ಸ್ಥಿತಿಯ ಕುರಿತು ಜಿಲ್ಲಾಧಿಕಾರಿಯವರಿಗೆ ಮನವರಿಕೆ ಮಾಡಿದರು.

ಪಡುಬಿದ್ರಿಯ ಕರ್ನಾಟಕ ಪಬ್ಲಿಕ್ ಸ್ಕೂಲ್‌ನಲ್ಲಿ ಮಕ್ಕಳೊಂದಿಗೆ ಕೂರ್ಮರಾವ್ ಸಮಯ ಕಳೆದರು.

ಕೆಲಕಾಲ ಮಕ್ಕಳೊಂದಿಗೆ ಮಾತುಕತೆ ನಡೆಸಿ ಅವರಿಂದ ಹಾಡು ಕೇಳಿದರು. ಇಬ್ಬರು ಹುಡುಗರು ಜಿಲ್ಲಾಧಿಕಾರಿ ಮುಂದೆ ಬಂದು ಇಂಗ್ಲಿಷ್ ಪ್ರಾಸ ಹೇಳುವ ಮೂಲಕ ಗಮನಸೆಳೆದರು.

ತಹಶೀಲ್ದಾರ್ ಶ್ರೀನಿವಾಸಮೂರ್ತಿ ಕುಲಕರ್ಣಿ ಇದ್ದರು.

ಪೋಷಕರ ಒತ್ತಾಯ
ಪಡುಬಿದ್ರಿಯ ಕರ್ನಾಟಕ ಪಬ್ಲಿಕ್ ಶಾಲೆ ಆರಂಭಗೊಂಡು ಮೂರು ವರ್ಷ ಕಳೆದಿದೆ. ವಿದ್ಯಾರ್ಥಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಆದರೆ ಶಾಲೆ ಮೂಲಸೌಕರ್ಯಗಳಿಲ್ಲದೆ ಸಮಸ್ಯೆ ಎದುರಿಸುತ್ತಿದೆ. ಸರ್ಕಾರ ಈ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು ಎಂದು ಪೋಷಕರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT