ಶುಕ್ರವಾರ, 14 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಸ್ಟೀಸ್ ಕೆ.ಎಸ್.ಹೆಗ್ಡೆ ಗ್ರಾಮೀಣ ಆರೋಗ್ಯ ಕೇಂದ್ರ; ಲ್ಯಾಬೋರೇಟರಿ ಉದ್ಘಾಟನೆ

Published 17 ಮೇ 2024, 14:46 IST
Last Updated 17 ಮೇ 2024, 14:46 IST
ಅಕ್ಷರ ಗಾತ್ರ

ಶಿರ್ವ: ಇಲ್ಲಿನ ವಿದ್ಯಾವರ್ಧಕ ಕ್ಯಾಂಪಸ್‌ನಲ್ಲಿ ನಿಟ್ಟೆ ವಿಶ್ವವಿದ್ಯಾನಿಲಯದ ವತಿಯಿಂದ ಸ್ಥಾಪಿಸಲ್ಪಟ್ಟ ಜಸ್ಟೀಸ್ ಕೆ.ಎಸ್.ಹೆಗ್ಡೆ ಗ್ರಾಮೀಣ ಆರೋಗ್ಯ ಕೇಂದ್ರದಲ್ಲಿ ಆಧುನಿಕ ಉಪಕರಣಗಳನ್ನೊಳಗೊಂಡ ಲ್ಯಾಬೋರೇಟರಿಯನ್ನು ನಿಟ್ಟೆ ವಿಶ್ವವಿದ್ಯಾನಿಲಯದ ಉಪಾಧ್ಯಕ್ಷ ಪ್ರೊ. ಸತೀಷ್ ಕುಮಾರ್ ಭಂಡಾರಿ ಶುಕ್ರವಾರ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ‘₹7 ಲಕ್ಷ ವೆಚ್ಚದಲ್ಲಿ ಸ್ಥಾಪಿಸಲ್ಪಟ್ಟ ಈ ಲ್ಯಾಬೋರೇಟರಿಯಲ್ಲಿ ಕಡಿಮೆ ವೆಚ್ಚದಲ್ಲಿ ಹಿಮೋಗ್ಲೋಬಿನ್, ರಕ್ತ ವರ್ಗೀಕರಣ, ಮಲೇರಿಯಾ, ಡೆಂಗ್ಯೂ ರಕ್ತ ಪರೀಕ್ಷೆ, ಯಕೃತ್ತು ಮತ್ತು ಮೂತ್ರಪಿಂಡದ ಕಾರ್ಯನಿರ್ವಹಣೆಗೆ ಸಂಬಂಧಪಟ್ಟ ಪರೀಕ್ಷೆ ಮಾಡಲಾಗುವುದು. ಅನುಭವ ಹೊಂದಿರುವ ಸಿಬ್ಬಂದಿ ನೇಮಿಸಲಾಗಿದ್ದು, ಪ್ರಯೋಜನ ಪಡೆದುಕೊಳ್ಳಬೇಕು’ ಎಂದರು. 

ಶಿರ್ವ ವಿದ್ಯಾವರ್ಧಕ ಸಂಘದ ಆಡಳಿತಾಧಿಕಾರಿ ಪ್ರೊ.ವೈ.ಭಾಸ್ಕರ ಶೆಟ್ಟಿ ಮಾತನಾಡಿ, ‘ನಿಟ್ಟೆ ವಿಶ್ವವಿದ್ಯಾನಿಲಯದ ವತಿಯಿಂದ ₹2 ಕೋಟಿ ವೆಚ್ಚದಲ್ಲಿ ಸ್ಥಾಪಿಸಲ್ಪಟ್ಟ ಜಸ್ಟೀಸ್ ಕೆ.ಎಸ್.ಹೆಗ್ಡೆ ಗ್ರಾಮೀಣ ಆರೋಗ್ಯ ಕೇಂದ್ರದಲ್ಲಿ ದಂತ ವೈದ್ಯಕೀಯ ಚಿಕಿತ್ಸೆಯೊಂದಿಗೆ ಸಾಮಾನ್ಯ ಆರೋಗ್ಯ ಸಮಸ್ಯೆಗಳಿಗೆ ಉಚಿತವಾಗಿ ಔಷಧಗಳನ್ನು ಒದಗಿಸಲಾಗುತ್ತಿದೆ’ ಎಂದರು.

ಕ್ಷೇಮಾ ಗ್ರಾಮೀಣ ಆರೋಗ್ಯ ಕೇಂದ್ರಗಳ ಸಂಯೋಜಕ ಮೇಜರ್ ರಾಘವೇಂದ್ರ ಹುಚ್ಚಣ್ಣವರ, ಕಚೇರಿ ಸಿಬ್ಬಂದಿ ಸುನಿಲ್ ಮಾನೈ, ಶಿರ್ವ ಗ್ರಾಮೀಣ ಕೇಂದ್ರದ ವೈದ್ಯಾಧಿಕಾರಿ ಡಾ. ಸಜ್ಞಾ ಶೆಟ್ಟಿ, ದಂತ ವೈದ್ಯಾಧಿಕಾರಿ ಡಾ. ನಿವೇದಿತಾ ಮೂರ್ತಿ, ಲ್ಯಾಬ್ ಟೆಕ್ನೀಷಿಯನ್ ಅನೆಟ್ ಜೂಲಿಯೆಟ್ ಬರ್ಬೋಜಾ, ಸಿಬ್ಬಂದಿ ನಾಗಲಕ್ಷ್ಮಿ, ದಿವ್ಯಾ, ಜ್ಯೋತಿಲಕ್ಷ್ಮಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT