ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಪಿ: 103 ಮದ್ಯದಂಗಡಿ ತೆರೆಯಲು ಅನುಮತಿ

Last Updated 3 ಮೇ 2020, 14:04 IST
ಅಕ್ಷರ ಗಾತ್ರ

ಉಡುಪಿ: ರಾಜ್ಯ ಸರ್ಕಾರ ಮದ್ಯ ಮಾರಾಟಕ್ಕೆ ಅವಕಾಶ ನೀಡಿದ್ದು, ಜಿಲ್ಲೆಯಲ್ಲಿ ಸೋಮವಾರದಿಂದ ಮದ್ಯದ ಅಂಗಡಿಗಳು ತೆರೆಯಲಿವೆ. ದಟ್ಟಣೆ ನಿಯಂತ್ರಿಸಲು ಹಾಗೂ ಅಂತರ ಕಾಯ್ದುಕೊಳ್ಳಲು ಭಾನುವಾರ ಮದ್ಯದಂಗಡಿಗಳ ಮುಂದೆ ಬ್ಯಾರಿಕೇಡ್‌ಗಳನ್ನು ಹಾಕಿ, ಮಾರ್ಕಿಂಗ್ ಮಾಡಲಾಯಿತು.‌

ಎಲ್ಲೆಲ್ಲಿ ಮದ್ಯ ಮಾರಾಟ

ವೈನ್‌ ಸ್ಟೋರ್ಸ್‌ ಹಾಗೂ ಎಂಎಸ್‌ಐಎಲ್‌ ಮಳಿಗೆಗಳಲ್ಲಿ ಮಾತ್ರ ಮದ್ಯ ಮಾರಬೇಕು. ಬಾರ್ ಅಂಡ್ ರೆಸ್ಟೋರೆಂಟ್‌ಗಳಲ್ಲಿ ಮಾರಾಟ ಮಾಡುವಂತಿಲ್ಲ.

ಎಷ್ಟಿವೆ ಬಾರ್‌ಗಳು

ಜಿಲ್ಲೆಯಲ್ಲಿ 400 ಮದ್ಯದಂಗಡಿಗಳಿದ್ದು, 103 ಮಳಿಗೆಗಳನ್ನು ತೆರೆಯಲು ಅನುಮತಿ ಸಿಕ್ಕಿದೆ. ಅದರಲ್ಲಿ 89 ವೈನ್‌ಶಾಪ್‌ಗಳಿದ್ದು, 14 ಎಎಸ್‌ಐಎಲ್‌ ಮಳಿಗೆಗಳಿವೆ.

ಮಾರಾಟ ಅವಧಿ

ಬೆಳಿಗ್ಗೆ 9ರಿಂದ ಸಂಜೆ 7ರವರೆಗೆ ಮದ್ಯ ಮಾರಲು ಅವಕಾಶ ನೀಡಿದ್ದರೂ, ಜಿಲ್ಲಾಡಳಿತ ಅನಗತ್ಯ ಸಂಚಾರ ತಪ್ಪಿಸಲು ಅಗತ್ಯ ವಸ್ತುಗಳ ಖರೀದಿಗೆ ನೀಡಿರುವಂತೆ ಮದ್ಯ ಮಾರಾಟಕ್ಕೆ ಮಧ್ಯಾಹ್ನ 1ರವರೆಗೆ ಮಾತ್ರ ಅನುಮತಿ ನೀಡಿದೆ.

ಮಾಲೀಕರು ಏನು ಮಾಡಬೇಕು

ದಟ್ಟಣೆ ನಿಯಂತ್ರಿಸಲು ಮದ್ಯದಂಗಡಿಗಳ ಮುಂದೆ ಬ್ಯಾರಿಕೇಡ್‌ ಹಾಕಬೇಕು, 6 ಅಡಿ ಅಂತರದಲ್ಲಿ ಮಾರ್ಕಿಂಗ್ ಮಾಡಬೇಕು, ಸ್ಯಾನಿಟೈಸರ್ ಹಾಕಿಯೇ ಗ್ರಾಹಕರನ್ನು ಒಳ ಬಿಡಬೇಕು, ಸಿಬ್ಬಂದಿ ಗ್ಲೌಸ್, ಮಾಸ್ಕ್ ಧರಿಸಿರಬೇಕು, ಗ್ರಾಹಕರೂ ಮಾಸ್ಕ್ ಧರಿಸಬೇಕು.

ಒಮ್ಮೆ ಒಬ್ಬರಿಗೆ ಮಾತ್ರ ಒಳಗೆ ಬಿಡಬೇಕು ಹಾಗೂ ಕಾನೂನು ಸುವ್ಯವಸ್ಥೆ ಸಮಸ್ಯೆ ಎದುರಾಗದಂತೆ ಎಚ್ಚರ ವಹಿಸಬೇಕು ಎಂದು ಮಾಲೀಕರಿಗೆ ಸೂಚಿಸಲಾಗಿದೆ ಎಂದರು ಅಬಕಾರಿ ಉಪ ಆಯುಕ್ತ ನಾಗೇಶ್‌ ಕುಮಾರ್.

ಅಂಗಡಿ ಮುಚ್ಚಿದ ಬಳಿಕ ಬ್ಯಾರಿಕೇಡ್‌ಗಳನ್ನು ಸ್ಯಾನಿಟೈಸರ್ ಹಾಗೂ ಹೈಪೋಕ್ಲೊರೈಡ್ ದ್ರಾವಣ ಬಳಸಿ ಶುಚಿಗೊಳಿಸಬೇಕು. ಸೋಂಕು ಹರಡದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಸನ್ನದುದಾರರಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.

ದರ ಶೇ 6ರಷ್ಟು ಹೆಚ್ಚಳ

ಏ.1ರಿಂದ ಮದ್ಯದ ದರ ಶೇ 6ರಷ್ಟು ಹೆಚ್ಚಾಗಿದ್ದು, ಸದ್ಯ ರಾಜ್ಯದ ಗೋದಾಮಿನಲ್ಲಿ ಸಂಗ್ರಹವಿರುವ ಮದ್ಯದ ದರ ಪರಿಷ್ಕರಿಸಬೇಕಿದೆ. ಆದರೂ, ಮದ್ಯ ಪೂರೈಕೆಗೆ ತೊಂದರೆಯಾಗದಂತೆ ಎಚ್ಚರವಹಿಸಲಾಗಿದೆ. ಸದ್ಯ ತಿಂಗಳಿಗಾಗುವಷ್ಟು ಮದ್ಯ ಜಿಲ್ಲೆಯಲ್ಲಿ ದಾಸ್ತಾನಿದೆ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT