ಬ್ರಹ್ಮಾವರ: ‘ದೇಶದ ಆರ್ಥಿಕತೆಗೆ ಹೈನುಗಾರಿಕೆ ಕ್ಷೇತ್ರ ಹೆಚ್ಚಿನ ಆದಾಯ ತಂದುಕೊಡುತ್ತಿದೆ. 10 ಹೈನುಗಾರರಿಗೆ 90 ಮಂದಿ ಬಳಕೆದಾರರು ಇದ್ದಾರೆ’ ಎಂದು ಕೆ.ಎಂ.ಎಫ್ ಶೇಖರಣೆ ಮತ್ತು ತಾಂತ್ರಿಕ ವಿಭಾಗದ ಉಪ ವ್ಯವಸ್ಥಾಪಕ ಮಾಧವ ಐತಾಳ ಹೇಳಿದರು.

ಬಾರ್ಕೂರು ಹಾಲು ಉತ್ಪಾದಕರ ಸಹಕಾರಿ ಸಂಘದಲ್ಲಿ ಆಡಳಿತ ಮಂಡಳಿ ಸದಸ್ಯರು ಮತ್ತು ಹೈನುಗಾರರಿಗೆ ಪಶು ಸಾಕಣೆ ಮತ್ತು ಹೈನುಗಾರಿಕೆ, ಹಾಲು ಹೆಚ್ಚಳದ ಕುರಿತು ಮಾಹಿತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಗ್ರಾಮೀಣ ಭಾಗದಲ್ಲಿ ಹೈನುಗಾರಿಕೆಗೆ ಹೆಚ್ಚು ಸೌಲಭ್ಯಗಳನ್ನು ನೀಡಲಾಗುತ್ತಿದೆ. ನಿರಂತರ ಹಾಲು ನೀಡುವ ಹೈನುಗಾರರಿಗೆ ಸಣ್ಣ ಡೇರಿ, ಹೆಣ್ಣು ಕರುವಿನ ಸಾಕಣೆಗೆ ವಿಶೇಷ ಮಹತ್ವ ಸೇರಿದಂತೆ ಅನೇಕ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.

ಸಂಘದ ಅಧ್ಯಕ್ಷ ಗಣೇಶ ಪೂಜಾರಿ, ಉಪಾಧ್ಯಕ್ಷೆ ಲೆನೆಟ್ ರಾಡ್ರಿಗಸ್, ಲೆಕ್ಕ ಪರಿಶೋಧಕ ಸುಧಾಕರ ರಾವ್ ಬಾರ್ಕೂರು, ಕಾರ್ಯನಿರ್ವಣಾ ಅಧಿಕಾರಿ ವಸಂತ, ಅನಿಲ್ ಫರ್ನಾಂಡಿಸ್, ಸರಸ್ವತಿ, ಪ್ರತಿಭಾ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.