ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾಬ್ ಕೊಡಿಸುವುದಾಗಿ ₹ 1,40 ಲಕ್ಷ ವಂಚನೆ

Last Updated 21 ಜನವರಿ 2023, 16:22 IST
ಅಕ್ಷರ ಗಾತ್ರ

ಉಡುಪಿ: ಆನ್‌ಲೈನ್‌ ಜಾಬ್ ನೀಡುವುದಾಗಿ ನಂಬಿಸಿ ಬ್ರಹ್ಮಾವರ ತಾಲ್ಲೂಕಿನ ಚೇರ್ಕಾಡಿಯ ನಿತಿನ್ ಎಂಬ ವ್ಯಕ್ತಿಗೆ ₹ 1,40,744 ವಂಚನೆ ಎಸಗಲಾಗಿದೆ.

ಗೂಗಲ್‌ನಲ್ಲಿ ಲವ್ ಲೋಕಲ್ ಎಂಬ ವೆಬ್‌ಸೈಟ್‌ನಲ್ಲಿದ್ದ ಮೊಬೈಲ್ ನಂಬರ್‌ಗೆ ಕರೆ ಮಾಡಿದಾಗ ಅನ್ಶುಲ್ ಗುಪ್ತಾ ಎಂಬಾತ ಕಂಪೆನಿಯ ಎಚ್.ಆರ್ ಎಂದು ಪರಿಚಯಿಸಿಕೊಂಡು ಆನ್ ಲೈನ್ ಜಾಬ್ ನೀಡುವುದಾಗಿ ನಂಬಿಸಿದ್ದಾನೆ.

ಡಿ.15 ರಿಂದ ಜ.6ರವರೆಗೆ ಹಲವು ಬಾರಿ ನಿತಿನ್ ಅವರಿಂದ ಹಣವನ್ನು ಗೂಗಲ್ ಪೇ ಮಾಡಿಸಿಕೊಂಡು ಉದ್ಯೋಗ ನೀಡದೆ ವಂಚನೆ ಎಸಗಿದ್ದಾರೆ. ಸೆನ್‌ ಠಾಣೆಯಲ್ಲಿ ಐಟಿ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

₹ 2,25 ಲಕ್ಷ ಮೌಲ್ಯದ ಚಿನ್ನಾಭರಣ ಕಳವು

ಮಲ್ಪೆ: ಕೊಡವೂರು ಮೂಡುಬೆಟ್ಟು ಮುಖ್ಯಪ್ರಾಣ ರಸ್ತೆಯಲ್ಲಿ ಮನೆಯಲ್ಲಿ ₹ 2,25 ಲಕ್ಷ ಮೌಲ್ಯದ ಚಿನ್ನಾಭರಣ ಕಳವು ಮಾಡಲಾಗಿದೆ.

ಶೇಖ್‌ ನಝೀರ್‌ ಅಹಮ್ಮದ್‌ ಈಚೆಗೆ ಕಾರ್ಕಳದ ಬೆಳುವಾಯಿಗೆ ಹೋಗಿದ್ದ ಸಂದರ್ಭ ಮನೆಯ ಬೀಗ ಮುರಿದು 2 ಚಿನ್ನದ ಬಳೆ, 3 ಚಿನ್ನದ ಉಂಗುರ, ಉಂಗುರ ಸಹಿತ ಬ್ರಾಸ್ ಲೇಟ್, ವಾಚ್‌ಗಳನ್ನು ಕಳವು ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT