ಶನಿವಾರ, ಜುಲೈ 31, 2021
24 °C

ಹೊಸೂರು: ತಾಯಿ, ಮಗಳು ನಾಪತ್ತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬ್ರಹ್ಮಾವರ: ಕರ್ಜೆ ಗ್ರಾಮದ ಹೊಸೂರು ತಡಾಲಿನ ಶಕೀಲಾ(38) ಮತ್ತು ಪುತ್ರಿ ಇಂಚರ(12) ಜೂನ್ 3ರಿಂದ ನಾಪತ್ತೆಯಾಗಿದ್ದಾರೆ.

‘ಶಕೀಲಾ ಅವರು ಹಿಲಿಯಾಣದ ವಿಜಯಕುಮಾರ್ ಎಂಬುವರೊಂದಿಗೆ ಮದುವೆಯಾಗಿ ಬೆಂಗಳೂರಿನಲ್ಲಿ ವಾಸವಿದ್ದು, ಒಂದು ವರ್ಷದ ಹಿಂದೆ ಸಂಸಾರದಲ್ಲಿ ಮನಸ್ತಾಪದಿಂದಾಗಿ ಗಂಡನನ್ನು ಬಿಟ್ಟು ಹೊಸೂರಿನ ತಂದೆಯ ಮನೆಯಲ್ಲಿಯೇ ವಾಸವಾಗಿದ್ದರು. ಜೂನ್ 3ರಂದು ಮಗಳೊಂದಿಗೆ ಹಿಲಿಯಾಣದ ಗಂಡನ ಮನೆಗೆ ಹೋಗುವುದಾಗಿ ತೆರಳಿದ್ದರು. ಅದೇ ದಿನ ಸಂಜೆ,  ಬೆಂಗಳೂರಿಗೆ ಬಂದಿದ್ದೇವೆ, ನಮ್ಮನ್ನು ಹುಡುಕುವುದು ಬೇಡ ಎಂದು ತಿಳಿಸಿ ಫೋನ್ ಸ್ವೀಚ್ ಆಫ್ ಮಾಡಿದ್ದಾರೆ. ಸಂಬಂಧಿಕರ ಮನೆಗೂ ಹೋಗದೇ ನಾಪತ್ತೆಯಾಗಿದ್ದಾರೆ’ ಎಂದು ತಂದೆ ಭುಜಂಗ ಶೆಟ್ಟಿ ಬ್ರಹ್ಮಾವರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು