ಮಂಗಳವಾರ, ಡಿಸೆಂಬರ್ 1, 2020
26 °C

ಬಸ್‌ ಮಾಲೀಕನ ಮೇಲೆ ವಿಫಲ ಕೊಲೆ ಯತ್ನ: 9 ಆರೋಪಿಗಳ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಡುಪಿ: ಎಕೆಎಂಎಸ್‌ ಸಂಸ್ಥೆಯ ಮಾಲೀಕ ಸೈಫುದ್ದೀನ್‌ ಕೊಲೆಗೆ ವಿಫಲ ಯತ್ನ ನಡೆಸಿ ‍ಪರಾರಿಯಾಗಿದ್ದ 9 ಆರೋಪಿಗಳನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

ವಿರಾಜಪೇಟೆಯ ದರ್ಶನ್‌ ದೇವಯ್ಯ, ಮೂಡುಬಿದಿರೆಯ ಸಂತೋಷ್‌, ಗೋಪಾಲ, ಸೋಮವಾರ ಪೇಟೆಯ ಅನಿಲ್ ಕುಮಾರ್‌, ಬೆಳ್ತಂಗಡಿಯ ಸುಕೇಶ್‌ ಪೂಜಾರಿ, ಮೋಹನ್‌, ಪಿರಿಯಾಪಟ್ಟಣದ ಮಹೇಶ್‌ ಬಾಬು, ಕೆಆರ್ ನಗರದ ಸೋಮು, ವಿರಾಜಪೇಟೆಯ ಸೌಭಾಗ್ಯ ಬಂಧಿತ ಆರೋಪಿಗಳು.

ನ.4ರಂದು ಮಣಿಪಾಲದ ಲಕ್ಷ್ಮೀಂದ್ರನಗರದಲ್ಲಿರುವ ಎಕೆಎಂಎಸ್‌ ಕಚೇರಿಗೆ ನುಗ್ಗಿದ್ದ ಆರೋಪಿಗಳು ಸೈಫುದ್ದೀನ್ ಹತ್ಯೆಗೆ ವಿಫಲ ಯತ್ನ ನಡೆಸಿ ಪರಾರಿಯಾಗಿದ್ದರು. ಆರೋಪಿಗಳ ಪತ್ತೆಗೆ ಮೂರು ತನಿಖಾ ತಂಡ ರಚಿಸಲಾಗಿತ್ತು. ಕಾರ್ಕಳದ ಮುರತ್ತಂಗಡಿಯ ರಿಜೆನ್ಸಿ ಲಾಡ್ಜ್‌ ಮೇಲೆ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

‌ಕುಂದಾಪುರ ಎಎಸ್‌ಪಿ ಹರಿರಾಮ್ ಶಂಕರ್, ಉಡುಪಿ ಡಿವೈಎಸ್‌ಪಿ ಜೈಶಂಕರ್, ಕಾರ್ಕಳ ಡಿವೈಎಸ್‌ಪಿ ಭರತ್.ಎಸ್.ರೆಡ್ಡಿ,  ಮಣಿಪಾಲ ಇನ್‌ಸ್ಪೆಕ್ಟರ್ ಮಂಜುನಾಥ್.ಎಂ ಗೌಡ, ಕಾರ್ಕಳ ಇನ್‌ಸ್ಪೆಕ್ಟರ್ ಸಂಪತ್ ಕುಮಾರ್, ಬ್ರಹ್ಮಾವರ ಇನ್‌ಸ್ಪೆಕ್ಟರ್ ಅನಂತಪದ್ಮನಾಭ, ಮಣಿಪಾಲ ಪಿಎಸ್‌ಐ ರಾಜಶೇಖರ್, ಬ್ರಹ್ಮಾವರ ಪಿಎಸ್‌ಐ ರಾಘವೇಂದ್ರ, ಹಿರಿಯಡ್ಕ ಪಿಎಸ್‌ಐ ಸುಧಾಕರ ತೋನ್ಸೆ, ಕಾರ್ಕಳ ಪಿಎಸ್‌ಐ ಪಿ.ಎಸ್‌.ಮಧು ಹೆಬ್ರಿ ಪಿಎಸ್‌ಐ ಸುಮಾ ಕಾರ್ಯಾಚರಣೆ ತಂಡದಲ್ಲಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.