ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪಡುಬಿದ್ರಿ | ಆನ್‌ಲೈನ್‌ನಲ್ಲಿ ವಂಚನೆ: ಪ್ರಕರಣ ದಾಖಲು

Published 18 ಜನವರಿ 2024, 14:40 IST
Last Updated 18 ಜನವರಿ 2024, 14:40 IST
ಅಕ್ಷರ ಗಾತ್ರ

ಪಡುಬಿದ್ರಿ: ‘ನೀವು ಕೋರಿಯರ್‌ನಲ್ಲಿ ಕಳುಹಿಸಿದ ವಸ್ತುವಿನ ಜತೆಗೆ ಡ್ರಗ್ಸ್ ಕಳುಹಿಸಲಾಗಿದೆ’ ಎಂದು ನಂಬಿಸಿ ಆನ್‌ಲೈನ್ ಮೂಲಕ ಹಣ ಪಡೆದು ವಂಚಿಸಿರುವ ಬಗ್ಗೆ ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಂದಿಕೂರಿನ ಕಂಪನಿಯೊಂದರಲ್ಲಿ ಶಿಫ್ಟ್ ಇನ್‌ಚಾರ್ಜ್ ಆಗಿರುವ ತಮಿಳುನಾಡು ಮೂಲದ ಟಿಯಾಗು ವಂಚನೆಗೊಳಗಾದವರು.

ಅವರ ಮೊಬೈಲ್‌ ಕರೆಗೆ ವ್ಯಕ್ತಿ ಕೊರಿಯರ್ ಕಂಪನಿಯ ಹೆಸರು ಹೇಳಿ ನೀವು ಮುಂಬೈನಿಂದ ಇರಾನ್‌ಗೆ ಮಾಡಿದ ಕೊರಿಯರ್ ತಲುಪಿಲ್ಲ ಎಂದು ಹೇಳಿದ್ದರು.

ಟಿಯಾಗು ಅವರು ಯಾವುದೇ ಕೊರಿಯರ್ ಆರ್ಡರ್ ಮಾಡಲಿಲ್ಲ. ಕೊರಿಯರ್‌ನಲ್ಲಿ ಏನಿದೆ ಎಂದು ಕೇಳಿದ್ದರು. ಕೋರಿಯರ್‌ನಲ್ಲಿ ಅಕ್ರಮವಾಗಿ ಡ್ರಗ್ ಕಳುಹಿಸಲಾಗುತ್ತಿದೆ. ನೀವು ಸಿಕ್ಕಿಬಿದ್ದರೆ ನಿಮ್ಮ ವಿರುದ್ಧ ಪ್ರಕರಣ ದಾಖಲಾಗುತ್ತದೆ. ನೀವು ಸೈಬರ್‌ ಪೊಲೀಸರಿಗೆ ದೂರು ನೀಡುವುದು ಉತ್ತಮ ಎಂದು ಮುಂಬೈ ಸೈಬರ್ ಕ್ರೈಂ ವಿಭಾಗಕ್ಕೆ ಕರೆ ವರ್ಗಾವಣೆ ಮಾಡುತ್ತೇನೆ’ ಎಂದು ಹೇಳಿದ್ದರು.

1 ನಿಮಿಷದ ಬಳಿಕ ಮತ್ತೊಬ್ಬ ಕರೆ ಮಾಡಿ, ‘ನಿಮ್ಮ ಖಾತೆ ಪರಿಶೀಲಿಸಬೇಕಿದ್ದು, ಐಸಿಐಸಿಐ ಬ್ಯಾಂಕ್‌ನ ಅಪ್ಲಿಕೇಶನ್‌ನಲ್ಲಿರುವ ಪ್ರಿ ಅಪ್ರೂವ್ಡ್‌ ಲೋನ್‌ ವಿಭಾಗಕ್ಕೆ ಹೋಗಿ ಪರ್ಸನಲ್ ಲೋನ್‌ ಬಟನ್‌ ಕ್ಲಿಕ್ ಮಾಡಲು ಹೇಳಿದ್ದರು. ಪ್ರಿ ಅಪ್ರೂವ್ಡ್‌ ಲೋನ್‌ಗೆ ಹೋಗಿ ಪರ್ಸನಲ್ ಲೋನ್‌ಗೆ ಕ್ಲಿಕ್ ಮಾಡಿದಾಗ ಲೋನ್ ಮೊತ್ತ ₹ 15,62, 921 ಎಂದು ಬಂದಿದ್ದು, ಅಪ್ಲೈ ಬಟನ್ ಕ್ಲಿಕ್ ಮಾಡಿದ್ದರು. ಆಗ ಬಂದ ಇಂಟರ್ ನೆಟ್ ಲಾಗಿನ್ ಒಟಿಪಿಯನ್ನು ಕರೆ ಮಾಡುತ್ತಿದ್ದ ವ್ಯಕ್ತಿಗೆ ನೀಡಿದ್ದರು. ಈ ಹಣ ಬ್ಯಾಂಕ್ ಖಾತೆಗೆ ಜಮಾ ಆಗಿದ್ದು, ನಂತರ ಆ ವ್ಯಕ್ತಿಯು ಸೈಬರ್ ಕ್ರೈಂನವರು ಎಂದು ನಂಬಿಸಿ ಖಾತೆ ಸಂಖ್ಯೆ ನೀಡಿ ಅವರ ಖಾತೆಗೆ ₹ 15,62,921 ಅನ್ನು ಆರ್‌ಟಿಜಿಎಸ್ ಮೂಲಕ ವರ್ಗಾಯಿಸಿದ್ದರು. ಈ ಬಗ್ಗೆ ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT