ಕಾರ್ಕಳ: ಬೀಡಿ ಕಾರ್ಮಿಕರ ಸಮಸ್ಯೆಗಳಿಗೆ ಶಾಸಕರು, ಸಂಸದರು ಯಾರೂ ಸ್ಪಂದಿಸುತ್ತಿಲ್ಲ ಎಂದು ಕಾರ್ಕಳ ತಾಲ್ಲೂಕು ಬೀಡಿ ಕಾರ್ಮಿಕರ ಸಂಘದ ಪ್ರಧಾನ ಕಾರ್ಯದರ್ಶಿ ಕವಿರಾಜ್ ಎಸ್. ಕಾಂಚನ್ ಆರೋಪಿಸಿದರು.

ಇಲ್ಲಿನ ತಾಲ್ಲೂಕು ಕಚೇರಿ ಎದುರು ಶುಕ್ರವಾರ ನಡೆದ ಬೀಡಿ ಕಾರ್ಮಿಕರ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ‘ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ 6 ಲಕ್ಷಕ್ಕೂ ಅಧಿಕ ಬೀಡಿ ಕಾರ್ಮಿಕರಿದ್ದು, ಬೆಲೆ ಏರಿಕೆ ಆಧಾರದಲ್ಲಿ ಸರ್ಕಾರವು ಪ್ರತಿವರ್ಷ ಬೀಡಿ ಕಾರ್ಮಿಕರ ತುಟ್ಟಿಭತ್ಯೆ ಹೆಚ್ಚಳ ಮಾಡಬೇಕಿತ್ತು. 2024ರ ಏಪ್ರಿಲ್ ತಿಂಗಳಿಂದ ಔದ್ಯಮಿಕ ಕಾರ್ಮಿಕರ ಗ್ರಾಹಕ ಬೆಲೆ ಸೂಚ್ಯಂಕ 568 ಪಾಯಿಂಟ್ ಆಗಿರುತ್ತದೆ. ಅದರಂತೆ ಸಾವಿರ ಬೀಡಿಗೆ ₹22.72ರಂತೆ ನೀಡಬೇಕು. ಅದರೆ, ಬೀಡಿ ಕಂಪನಿ ಮಾಲಿಕರು ನೀಡುತ್ತಿಲ್ಲ’ ಎಂದು ದೂರಿದರು.

ಮಂಗಳೂರು ಸಹಾಯಕ ಕಾರ್ಮಿಕ ಅಧಿಕಾರಿ 2 ಬಾರಿ ಕಂಪನಿಯ ಮಾಲೀಕರನ್ನು ಮಾತುಕತೆ ಕರೆದರೂ ಸ್ಪಂದಿಸಿಲ್ಲ. ಶಾಸಕರು, ಸಂಸದರು ದೊಡ್ಡ ಕಂಪನಿಯ ಮಾಲಿಕರ ಪರವಾಗಿರುವಂತಿದೆ. ಬೀಡಿ ಕಾರ್ಮಿಕರ ಸಮಸ್ಯೆಗಳ ಕುರಿತು ವಿಧಾನಸಭೆ, ಲೋಕಸಭೆಯಲ್ಲಿ ಮಾತನಾಡುವುದಿಲ್ಲ ಎಂದರು.

ಕಾರ್ಮಿಕ ಅಧಿಕಾರಿ ಮೂಲಕ ಮಂಗಳೂರು ಸಹಾಯಕ ಕಾರ್ಮಿಕ ಅಧಿಕಾರಿಗೆ ಮೆರವಣಿಗೆ ಮನವಿ ಸಲ್ಲಿಸಲಾಯಿತು.

ತಾಲ್ಲೂಕು ಬೀಡಿ ಕಾರ್ಮಿಕ ಸಂಘದ ಅಧ್ಯಕ್ಷೆ ಸುನೀತಾ ಶೆಟ್ಟಿ, ಕೋಶಾಧಿಕಾರಿ ಸುಮತಿ, ಕುಂದಾಪುರ ಬೀಡಿ ಕೆಲಸಗಾರರ ಸಂಘದ ಪ್ರಧಾನ ಕಾರ್ಯದರ್ಶಿ ಬಲ್ಕೀಸ್, ಉಡುಪಿ ಬೀಡಿ ಆ್ಯಂಡ್ ಟೊಬ್ಯಾಕೊ ಲೇಬರ್ ಯುನಿಯನ್ನ ನಳಿನಿ ಎಸ್., ಸಿಐಟಿಯು ಕಾರ್ಕಳ ತಾಲ್ಲೂಕು ಮುಖಂಡರಾದ ನಾಗೇಶ್, ಸಿಐಟಿಯು ಉಡುಪಿ ಮುಖಂಡ ಮೋಹನ್, ರೀತೇಶ್, ಕಾರ್ಕಳ ಬೀಡಿ ಕಂಟ್ರಾಕ್ಟರ್ ಮುಸ್ತಾಫ, ಬೀಡಿ ಮುಖಂಡರಾದ ವಿಲಾಸಿನಿ, ಶಕುಂತಲಾ, ಸುಮಿತ್ರಾ, ಜಯಂತಿ, ಲಕ್ಷ್ಮಿ, ಜಾನವಿ, ವಸಂತಿ ಶೆಟ್ಟಿ, ಲತಾ, ಮಾಲತಿ, ಜಯಂತಿ, ವನಿತಾ, ಕವಿತಾ, ಪ್ರಮೀಳಾ, ಉಷಾ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.