ಭಾನುವಾರ, ನವೆಂಬರ್ 28, 2021
21 °C

ಪಿಎಫ್‌ ಬಾಕಿ ಕೊಡಿಸುವುದಾಗಿ ₹ 2.80 ಲಕ್ಷ ವಂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಡುಪಿ: ಪತಿಯ ಫ್ರಾವಿಡೆಂಟ್ ಫಂಡ್‌ನಲ್ಲಿರುವ ಬಾಕಿ ಹಣವನ್ನು ಕೊಡಿಸುವುದಾಗಿ ನಂಬಿಸಿದ ವಂಚಕರು ಮಹಿಳೆಗೆ ₹ 2.80 ಲಕ್ಷ ವಂಚನೆ ಮಾಡಿದ್ದಾರೆ.

76 ಬಡಗುಬೆಟ್ಟುವಿನ ಶೈಲಜಾ ಬೆಟ್ರಬೆಟ್ ವಂಚನೆಗೊಳಗಾದವರು. ಈಚೆಗೆ ಶೈಲಜಾ ಅವರ ಮೊಬೈಲ್‌ಗೆ ಕರೆ ಮಾಡಿದ ವಂಚಕರು ಕೇಂದ್ರ ಸರ್ಕಾರದ ಇಂಟಿಗ್ರೇಟೆಡ್‌ ಗ್ರೇಡಿಯಂಟ್ ಮ್ಯಾನೆಜ್‌ಮೆಂಟ್‌ ಸಿಸ್ಟಂನಿಂದ ಮಾತನಾಡುತ್ತಿರುವುದಾಗಿ ನಂಬಿಸಿ, ಪತಿಯ ಪಿಎಫ್‌ ಬಾಕಿ ಕೊಡಿಸಲು ನೆರವು ನೀಡುವುದಾಗಿ ತಿಳಿಸಿದ್ದಾರೆ.

ತೆರಿಗೆ ಬಾಕಿ ಹಾಗೂ ಇತರೆ ಖರ್ಚುಗಳ ಪಾವತಿಸುವಂತೆ ಶೈಲಜಾ ಅವರಿಂದ 2,80,691 ನಗದನ್ನು ವಿವಿಧ ಬ್ಯಾಂಕ್ ಖಾತೆಗಳಿಗೆ ನೆಫ್ಟ್ ಮಾಡಿಸಿಕೊಂಡಿದ್ದಾರೆ. ಬಳಿಕ ಶೈಲಜಾ ಅವರಿಗೆ ವಂಚನೆಗೊಳಗಾಗಿರುವುದು ಅರಿವಿಗೆ ಬಂದಿದ್ದು, ಸೆನ್‌ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು