ಉಡುಪಿ: ವೈದ್ಯಕೀಯ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳ ಪುಸ್ತಕಗಳಲ್ಲಿ ಅಂಗರಚನಾ ಶಾಸ್ತ್ರಕ್ಕೆ ಸಂಬಂಧಪಟ್ಟ ಚಿತ್ರಗಳಿಗೆ ಹೆಚ್ಚಿನ ಪ್ರಾಮುಖ್ಯತೆ ಇರುತ್ತದೆ. ಅಂತಹ ಚಿತ್ರಗಳನ್ನು ಜಲವರ್ಣದಲ್ಲಿ ಮೂಡಿಸುವಲ್ಲಿ ನಿಪುಣರಾಗಿರುವ ಉಡುಪಿಯ ಪುತ್ತೂರಿನ ಹಿರಿಯ ಚಿತ್ರ ಕಲಾವಿದ ಪಿ.ಎನ್. ಆಚಾರ್ಯ ಅವರ ಚಿತ್ರಗಳು ಅಮೆರಿಕದ ಟಫ್ಟ್ಸ್ ವಿಶ್ವವಿದ್ಯಾಲಯದ ಪುಸ್ತಕದಲ್ಲೂ ಮೂಡಿ ಬಂದಿವೆ.

ಟಫ್ಟ್ಸ್ ವಿಶ್ವವಿದ್ಯಾಲಯದ ಅಂಗ ರಚನಾಶಾಸ್ತ್ರದ ಮುಖ್ಯಸ್ಥ ಎಂ.ಎಸ್.ಎ. ಕುಮಾರ್ ಅವರು ಪ್ರಾಣಿಗಳ ಅಂಗರಚನಾಶಾಸ್ತ್ರದ ಬಗ್ಗೆ ಬರೆದಿರುವ ಪುಸ್ತಕದಲ್ಲಿ ಪಿ.ಎನ್. ಆಚಾರ್ಯ ಅವರು ಬಿಡಿಸಿರುವ ಚಿತ್ರಗಳು ಪ್ರಕಟಗೊಂಡಿವೆ.

ಟಫ್ಟ್ಸ್ ವಿಶ್ವವಿದ್ಯಾಲಯ ಹೊರತಂದಿರುವ ಪುಸ್ತಕದ ಆರು ಸಂಪುಟಗಳು ಈಗಾಗಲೇ ಪ್ರಕಟಗೊಂಡಿದ್ದು, ಇದೀಗ ಏಳನೇ ಸಂಪುಟಕ್ಕಾಗಿ ಆಚಾರ್ಯ ಅವರು ತಮ್ಮ 76ನೇ ವಯಸ್ಸಿನಲ್ಲೂ ಚಿತ್ರ ರಚನೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಕೆಎಂಸಿಯ ಅಂಗರಚನಾ ವಿಭಾಗದಲ್ಲಿ ಮುಖ್ಯ ಕಲಾವಿದರಾಗಿ ಕಾರ್ಯನಿರ್ವಹಿಸಿ ನಿವೃತ್ತರಾಗಿರುವ ಆಚಾರ್ಯ ಅವರುಪ್ರಾಣಿಗಳ ಮತ್ತು ಮನುಷ್ಯರ ಅಂಗರಚನಾ ಶಾಸ್ತ್ರಕ್ಕೆ ಸಂಬಂಧಿಸಿದ ನೂರಾರು ಚಿತ್ರಗಳನ್ನು ರಚಿಸಿದ್ದಾರೆ. ಸಿಂಗಪುರ ವಿಶ್ವವಿದ್ಯಾಲಯದ ಅಂಗರಚನಾ ಶಾಸ್ತ್ರ ವಿಭಾಗದ ಸಂಪುಟಕ್ಕಾಗಿ ಮನುಷ್ಯರ ಅಂಗರಚನೆಗೆ ಸಂಬಂಧಿಸಿದ ಚಿತ್ರರಚನೆಯಲ್ಲೂ ತೊಡಗಿಸಿಕೊಂಡಿದ್ದಾರೆ.

ಜಲವರ್ಣದಲ್ಲಿ ಇವರು ಮೂಡಿಸಿರುವ ಚಿತ್ರಗಳು ಗಮನ ಸೆಳೆಯುತ್ತಿವೆ. ರಕ್ತ ನಾಳಗಳು, ಎಲುಬಿನ ರಚನೆಗಳು, ಹೃದಯ, ವಿವಿಧ ಅಂಗಾಂಗಗಳ ಚಿತ್ರಗಳು ನೈಜ ಭಾವ ಮೂಡಿಸುತ್ತವೆ.

‘ಇತರ ಚಿತ್ರಗಳಲ್ಲಿ ಸೌಂದರ್ಯ ಮುಖ್ಯವಾದರೆ ಅಂಗರಚನಾ ಶಾಸ್ತ್ರಕ್ಕೆ ಸಂಬಂಧಿಸಿದ ಚಿತ್ರಗಳಲ್ಲಿ ನೈಜ ಭಾವ ಮೂಡಿಸಬೇಕು. ಅಂತಹ ಚಿತ್ರಗಳನ್ನು ಅತ್ಯಂತ ನಾಜೂಕಾಗಿ ರಚಿಸಬೇಕಾಗುತ್ತದೆ. ಒಂದು ಚಿತ್ರರಚನೆಗೆ ನಾಲ್ಕೈದು ಗಂಟೆ ಬೇಕಾಗುತ್ತದೆ’ ಎನ್ನುತ್ತಾರೆ ಪಿ.ಎನ್. ಆಚಾರ್ಯ.

‘ಟಫ್ಟ್ಸ್ ವಿಶ್ವವಿದ್ಯಾಲಯದ ಪುಸ್ತಕಕ್ಕಾಗಿ ಬೆಕ್ಕು, ಕುದುರೆ, ಒಂಟೆ ಮೊದಲಾದ ಪ್ರಾಣಿಗಳ ಅಂಗ ರಚನೆಗೆ ಸಂಬಂಧಿಸಿದ ಚಿತ್ರಗಳನ್ನು ರಚಿಸಿದ್ದೇನೆ. ಅವರು ಚಿತ್ರದ ಜೆರಾಕ್ಸ್ ಪ್ರತಿ ಕಳುಹಿಸುತ್ತಿದ್ದರು. ಅದನ್ನು ಜಲವರ್ಣದಲ್ಲಿ ಮೂಡಿಸಿದ್ದೇನೆ ’ ಎಂದು ಅವರು ಹೇಳಿದರು.

‘20 ವರ್ಷದವನಿದ್ದಾಗ ನಮ್ಮ ಊರಿನ ದೇವಾಲಯದ ಗೋಡೆಯಲ್ಲಿ ಶಿವನ ಚಿತ್ರ ಬಿಡಿಸಿದ್ದೆ, ಅದಕ್ಕೆ ಊರವರಿಂದ ಮೆಚ್ಚುಗೆ ವ್ಯಕ್ತವಾಯಿತು. ಅಂದಿನಿಂದಲೇ ಚಿತ್ರ ಕಲೆಯ ಬಗ್ಗೆ ಆಸಕ್ತಿ ಮೂಡಿಸಿಕೊಂಡೆ. ಚಿತ್ರಕಲೆಯಲ್ಲಿ ಡಿಪ್ಲೊಮಾ ಕೂಡ ಮಾಡಿದ್ದೇನೆ’ ಎಂದೂ ಅವರು ತಿಳಿಸಿದರು.

ರಾಜ್ಯ ಸರ್ಕಾರವು ಈಚೆಗೆ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಪ್ರಯುಕ್ತ ಪಿ.ಎನ್. ಆಚಾರ್ಯ ಅವರಿಗೆ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಿದೆ.

ಕೋಟಿ–ಚೆನ್ನಯ ಚಿತ್ರದಿಂದ ಪ್ರಸಿದ್ಧಿ

ಪಿ.ಎನ್. ಆಚಾರ್ಯ ಅವರು ಬಿಡಿಸಿರುವ ತುಳುನಾಡಿನ ಅವಳಿ ವೀರರಾದ ಕೋಟಿ–ಚೆನ್ನಯರ ಚಿತ್ರವು ಹೆಚ್ಚು ಪ್ರಸಿದ್ಧಿ ಪಡೆದಿದೆ. ಈ ಚಿತ್ರವನ್ನು ಇಂದು ಬಹುತೇಕ ಗರಡಿಗಳಲ್ಲಿ ಮನೆಗಳಲ್ಲಿ ಕಾಣಬಹುದಾಗಿದೆ. ಅವರು ರಚಿಸಿರುವ ತುಳುವಪ್ಪೆ ಚಿತ್ರ ಕೂಡ ಹೆಚ್ಚು ಗಮನ ಸೆಳೆದಿದೆ. ಹಲವಾರು ಪೌರಾಣಿಕ ಪಾತ್ರಗಳೂ ಅವರ ಕುಂಚದಿಂದ ಅರಳಿವೆ. ‘ಕಾಳಿಕಾಂಬೆ ವಿಶ್ವಕರ್ಮ ಸೇರಿದಂತೆ ಹಲವಾರು ದೇವರ ಚಿತ್ರಗಳನ್ನೂ ಬಿಡಿಸಿದ್ದೇನೆ. ಕೆಲವು ವಾರ ಪತ್ರಿಕೆಗಳ ಕಥೆಗಳಿಗೂ ಚಿತ್ರಗಳನ್ನು ನೀಡಿದ್ದೇನೆ’ ಎಂದು ಪಿ.ಎನ್. ಆಚಾರ್ಯ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.