ಶುಕ್ರವಾರ, ಮೇ 14, 2021
27 °C

ಪರ್ಕಳ: ಹಳೆ ಕಟ್ಟಡ ತೆರವಿಗೆ ವಿರೋಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ರಾಷ್ಟ್ರೀಯ ಹೆದ್ದಾರಿ 169 ‘ಎ’ ಕಾಮಗಾರಿ ಸಂಬಂಧ ಪರ್ಕಳದಲ್ಲಿ ಆರಂಭವಾಗಿರುವ ಹಳೆಯ ಕಟ್ಟಡಗಳ ತೆರವು ಕಾರ್ಯಾಚರಣೆಗೆ ಭಾನುವಾರ ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿದರು. ಏಕಾಏಕಿ ಕಟ್ಟಡಗಳನ್ನು ಒಡೆಯಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭ ಸ್ಥಳಕ್ಕೆ ಬಂದ ಅಧಿಕಾರಿಗಳು ಹಾಗೂ ಅಂಗಡಿ ಮಾಲೀಕರ ನಡುವೆ ವಾಗ್ವಾದ ನಡೆಯಿತು. ಹಳೆ ಕಟ್ಟಡಗಳ ತೆರವು ವಿಧಾನಕ್ಕೆ ಸ್ಥಳೀಯರ ಸಮ್ಮತಿ ಇಲ್ಲ. ಏಕಾಏಕಿ ಕಟ್ಟಡಗಳನ್ನು ಒಡೆಯುತ್ತಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನೂರಾರು ಸ್ಥಳೀಯರು ಸ್ಥಳದಲ್ಲಿ ಜಮಾಯಿಸಿದ್ದರಿಂದ ಪರಿಸ್ಥಿತಿ ವಿಕೋಪಕ್ಕೆ ಹೋಗುವುದನ್ನು ಅರಿತ ಅಧಿಕಾರಿಗಳು ತಾತ್ಕಾಲಿಕವಾಗಿ ತೆರವು ಕಾರ್ಯಾಚರಣೆಯನ್ನು ನಿಲ್ಲಿಸಿದರು. ಕಾಂಗ್ರೆಸ್ ಮುಖಂಡರಾದ ರಮೇಶ್ ಕಾಂಚನ್‌ ಹಾಗೂ ಅಮೃತ್ ಶೆಣೈ ಸ್ಥಳದಲ್ಲಿದ್ದರು.

ಸುದ್ದಿ ತಿಳಿಯುತ್ತಿದ್ದಂತೆ ರಸ್ತೆ ವಿಸ್ತರಣೆ ಸ್ಥಳಕ್ಕೆ ಭೇಟಿನೀಡಿದ ಶಾಸಕ ರಘುಪತಿ ಭಟ್‌ ಸ್ಥಳೀಯರು ಹಾಗೂ ಕಾಂಗ್ರೆಸ್‌ ಮುಖಂಡರ ಜತೆ ಮಾತುಕತೆ ನಡೆಸಿದರು. ಭೂಸ್ವಾಧೀನ ಪ್ರಕ್ರಿಯೆ ಸಂಬಂಧ ತ್ರೀ ಜಿ ಪೂರ್ಣಗೊಂಡು ಪರಿಹಾರ ಮಂಜೂರಾದ ಬಳಿಕವೇ ಕಾಮಗಾರಿ ಆರಂಭವಾಗಿದೆ. ಜಾಗ ಕಳೆದುಕೊಂಡ ಎಲ್ಲರಿಗೂ ನಿಶ್ಚಿತವಾಗಿ ಪರಿಹಾರ ಸಿಗಲಿದೆ. ರಸ್ತೆ ವಿಸ್ತರಣೆ ಹಾಗೂ ಹೆದ್ದಾರಿ ಕಾಮಗಾರಿಗೆ ಅಡ್ಡಿಮಾಡದಂತೆ ಮನವಿ ಮಾಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.