ಶುಕ್ರವಾರ, ಸೆಪ್ಟೆಂಬರ್ 20, 2019
21 °C

ಮಳೆ ಬಿರುಸು: ಬಿರುಗಾಳಿಗೆ ಹಲವು ಮನೆಗಳಿಗೆ ಹಾನಿ

Published:
Updated:
Prajavani

ಉಡುಪಿ: ಜಿಲ್ಲೆಯಾದ್ಯಂತ ಭಾನುವಾರ ಬಿರುಸಿನ ಮಳೆಯಾಗಿದೆ. ಹೆಬ್ರಿಯಲ್ಲಿ ಬೆಳಿಗ್ಗೆ ಬೀಸಿದ ಸುಂಟರಗಾಳಿಗೆ ಹಲವು ಮನೆಗಳ ಹೆಂಚು, ಶೀಟುಗಳು ಹಾರಿಹೋಗಿವೆ. ಹಲವು ಮನೆಗಳಿಗೆ ಭಾಗಶಃ ಹಾನಿಯಾಗಿದ್ದು, ಗೃಹೋಪಯೋಗಿ ವಸ್ತುಗಳು ಹಾಳಾಗಿವೆ.

ಸಿದ್ದಾಪುರದ ಹೊಸಂಗಡಿ ಸರ್ಕಲ್‌ ಬಳಿ ಕಲ್ಲುಗುಡ್ಡೆ ಚಂದ್ರಶೆಟ್ಟಿ ಅವರ ಕಿರಾಣಿ ಅಂಗಡಿ ಚಾವಣಿ ಕುಸಿದು ಬಿದ್ದಿದೆ. ಕಳೆದ 24 ಗಂಟೆಯ ಅವಧಿಯಲ್ಲಿ ಜಿಲ್ಲೆಯಲ್ಲಿ ಸರಾಸರಿ 4.1 ಸೆ.ಮೀ ಮಳೆಯಾಗಿದೆ. ಉಡುಪಿಯಲ್ಲಿ ಹೆಚ್ಚು 7.5, ಕಾರ್ಕಳದಲ್ಲಿ ಕಡಿಮೆ 3.4, ಕುಂದಾಪುರದಲ್ಲಿ 5.6 ಸೆ.ಮೀ ಮಳೆಯಾಗಿದೆ.

 

Post Comments (+)