ಭಾನುವಾರ, ನವೆಂಬರ್ 27, 2022
26 °C

ರೋಟರಿ ‘ಜ್ಞಾನಾಂಬುಧಿ’ ಕಾರ್ಯಕ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೈಂದೂರು: ‘ನಮ್ಮಲ್ಲಿನ ಕೌಶಲದ ಮೂಲಕ ಸಮುದಾಯದ ಅಭಿವೃದ್ಧಿಗೆ ಪ್ರತಿಯೊಬ್ಬರೂ ನೆರವಾಗಬಹುದಾಗಿದೆ. ಆಸಕ್ತಿ ಆಧಾರಿತ ಕಲಿಕೆಯಿಂದ ವಿವಿಧ ಕ್ಷೇತ್ರದಲ್ಲಿ ಪರಿಣತಿಯನ್ನು ಹೊಂದಲು ಸಾಧ್ಯವಿದೆ ಎಂದು ಜಿಲ್ಲಾ ಸಾಕ್ಷರತಾ ಅಧ್ಯಕ್ಷ ಶ್ರೀಕಾಂತ್ ಪ್ರಭು ಹೇಳಿದರು.

ರೋಟರಿ ಜಿಲ್ಲೆ 3182 ರೋಟರಿ ಕ್ಲಬ್ ಬೈಂದೂರು ಆಶ್ರಯದಲ್ಲಿ ಇಲ್ಲಿನ ರೋಟರಿ ಭವನದಲ್ಲಿ ಆಯೋಜಿಸಲಾದ ಝೋನಲ್ ಸೆಮಿನಾರ್ ಆನ್ ಲಿಟರಸಿ ‘ಜ್ಞಾನಾಂಬುಧಿ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ರೋಟರಿ ಜಿಲ್ಲೆ 3182 ಝೋನ್ 1ರ ಅಸಿಸ್ಟೆಂಟ್ ಗವರ್ನರ್ ಉಮೇಶ್ ಪುತ್ರನ್, ಝೋನಲ್ ಟ್ರೇನರ್ ರವಿರಾಜ್ ಶೆಟ್ಟಿ, ಝೋನಲ್ ಲೆಫ್ಟಿನೆಂಟ್‌ಗಳಾದ ಪ್ರವೀಣ ಶೆಟ್ಟಿ, ಸಂದೀಪ್ ಕುಮಾರ್ ಶೆಟ್ಟಿ, ಪೂರ್ಣಿಮಾ ಭವಾನಿ ಶಂಕರ್, ಝೋನಲ್ ಲಿಟರಸಿ ಕೋ-ಆರ್ಡಿನೇಟರ್ ಮಂಜುನಾಥ ಶೆಟ್ಟಿ, ಜಿಲ್ಲಾ ಲಿಟರಸಿ ಸಬ್ ಕಮಿಟಿ ಉಪಾಧ್ಯಕ್ಷ ಐ. ನಾರಾಯಣ, ಬೈಂದೂರು ರೋಟರಿ ಲಿಟರೆಸಿ ಛೇರ್ಮನ್ ಸುಬ್ರಹ್ಮಣ್ಯ ಜಿ. ಮೊದಲಾದವರು ಇದ್ದರು.

ಬೈಂದೂರು ರೋಟರಿ ಅಧ್ಯಕ್ಷ ಎಚ್. ಉದಯ ಆಚಾರ್ ಸ್ವಾಗತಿಸಿದರು. ಅಸಿಸ್ಟೆಂಟ್ ಗವರ್ನರ್ ಉಮೇಶ್ ಪುತ್ರನ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪೂರ್ಣಿಮಾ ವಿಷ್ಣು ಪೈ ಪ್ರಾರ್ಥಿಸಿದರು.

ಆನಂದ ಮದ್ದೋಡಿ, ಸುಬ್ರಹ್ಮಣ್ಯ ಜಿ. ಉಪ್ಪುಂದ ಸನ್ಮಾನಿತರ ಪರಿಚಯ ವಾಚಿಸಿದರು. ಕಾರ್ಯದರ್ಶಿ ಸುಧಾಕರ ಪಿ
ವಂದಿಸಿದರು. ಸೋಮನಾಥನ್ ಆರ್. ಕಾರ್ಯಕ್ರಮ ನಿರೂಪಿಸಿದರು. ಬಳಿಕ ರಾಷ್ಟ್ರೀಯ ತರಬೇತುದಾರ ರಾಜೇಂದ್ರ ಭಟ್ ಕೆ.
ಅವರಿಂದ `ಸಾಕ್ಷರತೆ, ದೇಶ ಕಟ್ಟಲು ಅನಿವಾರ್ಯ ಸಾಧನ' ಎಂಬ ವಿಷಯದ ಕುರಿತು ಉಪನ್ಯಾಸ ನಡೆಯಿತು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು