ಡಾ.ಎನ್.ಟಿ.ಭಟ್ಟರಿಗೆ ಸೇಡಿಯಾಪು ಪ್ರಶಸ್ತಿ

ಮಂಗಳವಾರ, ಜೂನ್ 25, 2019
25 °C
ಜೂನ್ 8ರಂದು ಪ್ರಶಸ್ತಿ ಪ್ರಧಾನ

ಡಾ.ಎನ್.ಟಿ.ಭಟ್ಟರಿಗೆ ಸೇಡಿಯಾಪು ಪ್ರಶಸ್ತಿ

Published:
Updated:
Prajavani

ಉಡುಪಿ: ಅನುವಾದ ಸಾಹಿತ್ಯವನ್ನೊಳಗೊಂಡ ಭಾಷಾ ಕ್ಷೇತ್ರಕ್ಕೆ ದಶಕಗಳ ಕಾಲ ದುಡಿದಿರುವ ಜರ್ಮನ್ ಭಾಷಾತಜ್ಞ, ಬಹುಭಾಷಾ ಜ್ಞಾನಿ ಡಾ.ನೀರ್ಕಜೆ ತಿರುಮಲೇಶ್ವರ ಭಟ್ ಅವರು 2019ನೇ ಸಾಲಿನ ಸೇಡಿಯಾಪು ಕೃಷ್ಣ ಭಟ್ಟ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಪ್ರಶಸ್ತಿ ₹10,000 ನಗದು ಹಾಗೂ ಫಲಕ ಒಳಗೊಂಡಿದೆ. ಜೂನ್ 8ರಂದು ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದು ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಸಂಯೋಜಕ ಪ್ರೊ.ವರದೇಶ ಹಿರೇಗಂಗೆ ತಿಳಿಸಿದ್ದಾರೆ.

ಎನ್.ಟಿ.ಭಟ್ಟ ಎಂದೇ ಪ್ರಸಿದ್ಧವಾಗಿರುವ ಡಾ.ನೀರ್ಕಜೆ ತಿರುಮಲೇಶ್ವರ ಭಟ್ಟರು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕಿನ ನೀರ್ಕಜೆಯಲ್ಲಿ ಜನಿಸಿದರು. ಎಂ.ಜಿ.ಎಂ ಕಾಲೇಜಿನಲ್ಲಿ ಪದವಿ, ಆಲಿಫರ್ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ ಎಂ.ಎ (ಇಂಗ್ಲಿಷ್), ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಜರ್ಮನ್ ವಿಷಯದಲ್ಲಿ ಎಂ.ಎ ಮಾಡಿದ್ದಾರೆ.

ಮ್ಯೂನಿಚ್ ವಿಶ್ವವಿದ್ಯಾಲಯದಲ್ಲಿ ಗ್ರೋಸೆಸ್ ಶ್ಟ್ರಾಖ್ ಡಿಪ್ಲೊಮಾ, ಕರ್ನಾಟಕ ವಿಶ್ವವಿದ್ಯಾಲಯದಿಂದ ‘ಹೈನ್ ರಿಶ್ ಬೊಲ್ ಅವರ ಕೃತಿಗಳಲ್ಲಿ ಗಾಂಧಿ ತತ್ವ’ ಎಂಬ ವಿಷಯದಲ್ಲಿ ಪಿಎಚ್.ಡಿ ಪಡೆದಿದ್ದಾರೆ.

ಎಂ.ಜಿ.ಎಂ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ, ವಿಭಾಗದ ಮುಖ್ಯಸ್ಥರಾಗಿ, ಜರ್ಮನ್ ಭಾಷಾ ಭೋಧಕ, ಅನುವಾದಕ, ದಾಖಲಾತಿ ತಂತ್ರಜ್ಞ, ವಿಮರ್ಶಕ, ಪತ್ರಿಕೆಗಳ ಯೋಜನೆ ಮತ್ತು ಸಂಪಾದಕರಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಪ್ರಾದೇಶಿಕ ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರದ ನಿರ್ದೇಶಕರಾಗಿಯೂ ದುಡಿದಿದ್ದಾರೆ.

ಕು.ಶಿ.ಹರಿದಾಸ ಭಟ್ಟ, ದೊರಕಿದ ದಾರಿ (ಆತ್ಮಕಥನ) ಶಾಸ್ತ್ರ-ಪ್ರಯೋಗ ಕೃತಿ, ಕನ್ನಡದಿಂದ ಜರ್ಮನಿಗೆ, ಇಂಗ್ಲೀಷ್‌ನಿಂದ ಕನ್ನಡಕ್ಕೆ, ಕನ್ನಡದಿಂದ ಇಂಗ್ಲೀಷಿಗೆ ಹಲವು ಗ್ರಂಥಗಳನ್ನು ಅನುವಾದಿಸಿದ್ದಾರೆ. ಜರ್ಮನ್ ರಾಷ್ಟ್ರಪತಿ ಅವರಿಂದ ಆರ್ಡರ್ ಆಫ್ ಮೆರಿಟ್ ಪುರಸ್ಕಾರ ಸಿಕ್ಕಿದೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !