ಕಟಪಾಡಿ: ಉಡುಪಿಯ ಕಟಪಾಡಿಯಲ್ಲಿರುವ ಎಸ್ವಿಎಸ್ ಪದವಿ ಪೂರ್ವ ಕಾಲೇಜಿನ ಕನ್ನಡ ಮಾಧ್ಯಮ ಅನುದಾನಿತ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳಿಗಾಗಿ ಮಂಗಳವಾರ(ಫೆ.3) ಆಶುಭಾಷಣ ಸ್ಪರ್ಧೆ ಆಯೋಜಿಸಲಾಗಿತ್ತು.

ಶಾಲೆಯ ಹಳೆ ವಿದ್ಯಾರ್ಥಿಗಳಾದ ಉದ್ಯಮಿ ನರೇಂದ್ರ ಶೆಟ್ಟಿ, ಸಾಹಿತಿ ಶಾಂತಾರಾಮ್ ಶೆಟ್ಟಿ, ಯಕ್ಷಗಾನ ಕಲಾವಿದ ಅರುಣ್ ಐರೋಡಿ ಅವರ ಸಹಕಾರದೊಂದಿಗೆ ಶಿರಸಿಯ ಅಧ್ಯಾಯ ಟ್ರಸ್ಟ್ ನಿರ್ದೇಶಕರಾದ ಕಿರಣ್ ಉಪಾಧ್ಯಾಯ ಅವರು ಸ್ಪರ್ಧೆಯನ್ನು ಆಯೋಜಿಸಿದ್ದರು.

ಕಾಲೇಜಿನ ಕನ್ನಡ ಶಿಕ್ಷಕಿ ವಿದ್ಯಾ, ವಿಜ್ಞಾನ ಶಿಕ್ಷಕ ರಂಗನಟ, ನಿರ್ದೇಶಕ ಸಂತೋಷ್ ನಾಯಕ್ ಪಟ್ಲ ಮತ್ತು ನರೇಂದ್ರ ಶೆಟ್ಟಿ ಅವರು ತೀರ್ಪುಗಾರರಾಗಿದ್ದರು.

ಇದೇ ಸಂದರ್ಭದಲ್ಲಿ ಏಣಗುಡ್ಡೆ ಸಾರ್ವಜನಿಕ ಗ್ರಂಥಾಲಯ ಹಾಗೂ ಎಸ್ವಿಎಸ್ ಪದವಿ ಪೂರ್ವ ಕಾಲೇಜಿನ ಗ್ರಂಥಾಲಯಗಳಿಗೆ ಟ್ರಸ್ಟಿನ ವತಿಯಿಂದ ಕನ್ನಡ ಸಾಹಿತ್ಯದ ಪುಸ್ತಕಗಳನ್ನು ವಿತರಿಸಿದರು.

ಬಹುಮಾನ ವಿತರಣಾ ಸಮಾರಂಭದ ಅಧ್ಯಕ್ಷತೆಯನ್ನು ಎಸ್ವಿಎಸ್ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಸತ್ಯೇಂದ್ರ ಪೈ ವಹಿಸಿಕೊಂಡಿದ್ದರು. ಶಾಲಾ ಆಡಳಿತ ಮಂಡಳಿಯ ಸದಸ್ಯರಾದ ವೆಂಕಟರಮಣ ಭಟ್, ಗಣೇಶ್ ಕಿಣಿ, ಶ್ರೀನಿವಾಸ ಕಿಣಿ, ಆಡಳಿತಾಧಿಕಾರಿ ಸುಧಾಕರ್ ಬ್ರಹ್ಮಾವರ್ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.