ಮಂಗಳವಾರ, 28 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರಜ್ ಚೋಪ್ರಾ ಆಕರ್ಷಣೆ

ಅಥ್ಲಟಿಕ್ಸ್‌: ಭಾರತಕ್ಕೆ ಪದಕಗಳ ಸಿಂಹಪಾಲು ಗಳಿಕೆಯ ವಿಶ್ವಾಸ
Published 28 ಸೆಪ್ಟೆಂಬರ್ 2023, 16:30 IST
Last Updated 28 ಸೆಪ್ಟೆಂಬರ್ 2023, 16:30 IST
ಅಕ್ಷರ ಗಾತ್ರ

ಹಾಂಗ್‌ಝೌ : ಒಲಿಂಪಿಕ್ಸ್ ಮತ್ತು ವಿಶ್ವ ಚಾಂಪಿಯನ್ ಜಾವೆಲಿನ್ ಥ್ರೋ ಅಥ್ಲೀಟ್ ನೀರಜ್ ಚೋಪ್ರಾ ನಾಯಕತ್ವದ ತಂಡವು ಶುಕ್ರವಾರ ಆರಂಭವಾಗಲಿರುವ ಅಥ್ಲೆಟಿಕ್ಸ್‌ನಲ್ಲಿ ಕಣಕ್ಕಿಳಿಯಲಿದೆ.

65 ಅಥ್ಲೀಟ್‌ಗಳ ತಂಡವು ಕನಿಷ್ಟ 25 ಪದಕಗಳನ್ನು ಜಯಿಸುವ ಭರ್ತಿ ವಿಶ್ವಾಸದಲ್ಲಿದೆ. ಭಾರತ ಅಥ್ಲೆಟಿಕ್ಸ್ ಫೆಡರೇಷನ್ (ಎಎಫ್‌ಐ) 68 ಅಥ್ಲೀಟ್‌ಗಳ ತಂಡವನ್ನು ಪ್ರಕಟಿಸಿತ್ತು. ಆದರೆ ಮೂವರು ಗಾಯದ ಸಮಸ್ಯೆಯಿಂದ ಹೊರನಡೆದರು. 

2018ರಲ್ಲಿ ಜಕಾರ್ತದಲ್ಲಿ ನಡೆದಿದ್ದ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತದ ಅಥ್ಲೀಟ್‌ಗಳು 20 (8 ಚಿನ್ನ, 9 ಬೆಳ್ಳಿ, 3 ಕಂಚು) ಪದಕಗಳನ್ನು ಜಯಿಸಿದ್ದರು. ಆಗ 70 ಮಂದಿ ಭಾಗವಹಿಸಿದ್ದರು.

‘ಈ ಸಲ ಅಥ್ಲೆಟಿಕ್ಸ್‌ನಲ್ಲಿಯೇ 25 ಪದಕಗಳನ್ನು ಗೆಲ್ಲುವ ಗುರಿ ಇಟ್ಟುಕೊಂಡಿದ್ದೇವೆ. ಅದಕ್ಕಿಂತ ಹೆಚ್ಚು ಬಂದರೆ ಬೋನಸ್ ಆಗಲಿದೆ’ ಎಂದು ಎಎಫ್‌ಐ ಹೇಳಿದೆ.

ನೀರಜ್ ಚೋಪ್ರಾ(ಜಾವೆಲಿನ್), ತಜೀಂದರ್ ಪಾಲ್ (ಶಾಟ್‌ಪಟ್), ಅವಿನಾಶ್ ಸಬ್ಳೆ (3000 ಮೀ ಸ್ಟೀಪಲ್ ಚೇಸ್), ಪುರುಷ ಹಾಗೂ ಮಹಿಳಾ ರಿಲೆ (4X400 ಮೀ) ತಂಡಗಳ ಮೇಲೆ ಪದಕ ಗೆಲುವಿನ ನಿರೀಕ್ಷೆ ಇದೆ. ತೂರ್ ಮತ್ತು ಪುರುಷರ ರಿಲೆ ತಂಡಗಳು ಏಷ್ಯನ್ ಶ್ರೇಷ್ಠ ದಾಖಲೆ ಹೊಂದಿವೆ. 

25 ವರ್ಷದ ನೀರಜ್ ಈಚೆಗಷ್ಟೇ ವಿಶ್ವ ಚಾಂಪಿಯನ್ ಆಗಿದ್ದರು. 2021ರಲ್ಲಿ ಟೋಕಿಯೊದಲ್ಲಿ ಒಲಿಂಪಿಕ್ ಕೂಟದ ಚಿನ್ನ ಕೂಡ ಜಯಿಸಿದ್ದರು. 2018ರ ಏಷ್ಯಾ ಕೂಟದಲ್ಲಿಯೂ ಅವರು ಚಾಂಪಿಯನ್ ಆಗಿದ್ದರು. ಪಾಕಿಸ್ತಾನದ ಜಾವೆಲಿನ್ ಅಥ್ಲೀಟ್ ಅರ್ಷದ್ ನದೀಂ ಅವರು ನೀರಜ್‌ಗೆ ಸ್ಪರ್ಧೆಯೊಡ್ಡಲು ಸಿದ್ಧರಾಗಿದ್ದಾರೆ. ಈ ವಿಭಾಗದಲ್ಲಿ ಭಾರತದ ಕಿಶೋರ್ ಜೇನಾ ಕೂಡ ಸ್ಪರ್ಧೆಯಲ್ಲಿದ್ದಾರೆ.

ಪುರುಷರ ಲಾಂಗ್‌ ಜಂಪ್‌ನಲ್ಲಿ ಮುರಳಿ ಶ್ರೀಶಂಕರ್ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಪದಕ ಜಯಿಸುವಲ್ಲಿ ವಿಫಲರಾಗಿದ್ದರು. ಆದರೆ ಇಲ್ಲಿ  ಅವರು ಪುಟಿದೇಳುವ ನಿರೀಕ್ಷೆ ಇದೆ. 8.41 ಮೀಟರ್ ದೂರ ಜಿಗಿಯುವ ಸಮರ್ಥರು ಅವರಾಗಿದ್ದಾರೆ. 

ಮಹಿಳೆಯರ ವಿಭಾಗದಲ್ಲಿ ಜ್ಯೋತಿ ಯರಾಜಿ(100 ಮೀ ಹರ್ಡಲ್ಸ್), ವಿತ್ಯಾ ರಾಮರಾಜ್ (400 ಮೀ ಹರ್ಡಲ್ಸ್), ಶೈಲಿ ಸಿಂಗ್ (ಲಾಂಗ್‌ ಜಂಪ್), ಪಾರುಲ್ ಚೌಧರಿ (3000ಮೀ ಸ್ಟೀಪಲ್ ಚೇಸ್), ಸ್ವಪ್ನಾ ಬರ್ಮನ್ (ಹೆಪ್ಟಾಥ್ಲಾನ್),  ಪ್ರಿಯಾಂಕಾ ಗೋಸ್ವಾಮಿ (ರೇಸ್‌ ವಾಕಿಂಗ್),, ರಚನಾ ಕುಮಾರಿ ಮತ್ತು ತಾನ್ಯಾ ಚೌಧರಿ (ಹ್ಯಾಮರ್ ಥ್ರೋ) ಅವರು ಪದಕ ಜಯದ ಭರವಸೆಯಲ್ಲಿದ್ದಾರೆ.

[object Object]
ಶೈಲಿ ಸಿಂಗ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT