ಭಾನುವಾರ, ಏಪ್ರಿಲ್ 2, 2023
24 °C

'ಬೈಕಾಟ್ ಪಠಾಣ್‌' ಅಭಿಯಾನಕ್ಕೆ ಶ್ರೀರಾಮಸೇನೆ ಬೆಂಬಲ: ಮುತಾಲಿಕ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಶಾರುಖ್‌ಖಾನ್ ಹಾಗೂ ದೀಪಿಕಾ ಪಡುಕೋಣೆ ಅಭಿನಯಿಸಿರುವ ಬಾಲಿವುಡ್‌ ಸಿನಿಮಾ ಪಠಾಣ್‌ನಲ್ಲಿ ಕೇಸರಿ ಬಣ್ಣಕ್ಕೆ ಅವಮಾನ ಮಾಡಲಾಗಿದ್ದು ‘ಬೈಕಾಟ್ ಪಠಾಣ್’ ಅಭಿಯಾನಕ್ಕೆ ಬೆಂಬಲ ನೀಡುವುದಾಗಿ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದರು.

ಶನಿವಾರ ಮಥುರಾ ಹೋಟೆಲ್ ಸಭಾಂಗಣದಲ್ಲಿ ಮಾತನಾಡಿ, ಪಠಾಣ್ ಚಿತ್ರದಲ್ಲಿ ಕೇಸರಿಯನ್ನು ನಾಚಿಕೆಗೇಡಿನ ಬಣ್ಣವಾಗಿ ತೋರಿಸಲಾಗಿದ್ದು ಅಶ್ಲೀಲ, ಅಸಭ್ಯವಾದ ದೃಶ್ಯಗಳು ಹೆಚ್ಚಾಗಿವೆ. ಬಾಲಿವುಡ್‌ ಸಿನಿಮಾಗಳಲ್ಲಿ ನಿರಂತರವಾಗಿ ಇಸ್ಲಾಮೀಕರಣ, ನಾಸ್ತಿಕವಾದ, ಕಮ್ಯುನಿಸಂ ವೈಭವೀಕರಿಸಿ ಹಿಂದೂಗಳನ್ನು ಗುರಿಯಾಗಿಸಲಾಗುತ್ತಿದೆ ಎಂದು ಆರೋಪಿಸಿದರು.

ಬಾಲಿವುಡ್‌ನ ಮೂವರೂ ಖಾನ್‌ಗಳು (ಸಲ್ಮಾನ್‌, ಶಾರುಖ್‌, ಅಮೀರ್‌) ದೇಶದ್ರೋಹಿ, ಧರ್ಮದ್ರೋಹಿ ಹಾಗೂ ಹಿಂದೂ ದ್ರೋಹಿಗಳು. ಖಾನ್‌ಗಳ ಸಿನಿಮಾನದಲ್ಲಿ ಹಿಂದೂ ಸಂಸ್ಕೃತಿಯನ್ನು ವ್ಯವಸ್ಥಿತವಾಗಿ ನಾಶಮಾಡುವ ಯತ್ನ ನಡೆಯತ್ತಿದೆ ಎಂದು ದೂರಿದರು.

ಕಾರ್ಕಳದಿಂದ ಸ್ಪರ್ಧೆ:

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾರ್ಕಳ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದು, ಬಿಜೆಪಿ ವಿರುದ್ಧದ ಹೋರಾಟ ಮಾಡುತ್ತಿಲ್ಲ; ಡೋಂಗಿ ಹಿಂದುತ್ವವಾದಿಗಳ ವಿರುದ್ಧ ಹೋರಾಟ ಮಾಡುತ್ತೇನೆ ಎಂದು ಮುತಾಲಿಕ್ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು