ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

SSLC Result | 5ನೇ ರ್‍ಯಾಂಕ್‌ ಪಡೆದ ಪ್ರತ್ವಿತಾಗೆ ಐಎಎಸ್ ಅಧಿಕಾರಿಯಾಗುವ ಗುರಿ

Published 9 ಮೇ 2024, 13:59 IST
Last Updated 9 ಮೇ 2024, 13:59 IST
ಅಕ್ಷರ ಗಾತ್ರ

ಕುಂದಾಪುರ: ತಾಲ್ಲೂಕಿನ ಎಕ್ಸ್‌ಲೆಂಟ್ ಮತ್ತು ಲಿಟ್ಲ್‌ಸ್ಟಾರ್ ಆಂಗ್ಲಮಾಧ್ಯಮ ಶಾಲೆ ವಿದ್ಯಾರ್ಥಿನಿ ಪ್ರತ್ವಿತಾ ಪಿ.ಶೆಟ್ಟಿ ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ 621 ಅಂಕ ಪಡೆದು ರಾಜ್ಯಕ್ಕೆ 5ನೇ, ತಾಲ್ಲೂಕಿಗೆ ಪ್ರಥಮ ರ್‍ಯಾಂಕ್ ಗಳಿಸಿದ್ದಾರೆ.

ಅವರು ಹೊಂಬಾಡಿಯ ಹೊರ್ವರ ಮನೆಯ ಪ್ರಭಾಕರ ಶೆಟ್ಟಿ, ಭಾಗ್ಯ ಪಿ.ಶೆಟ್ಟಿ ದಂಪತಿ ಪುತ್ರಿ. ತಂದೆ ಪ್ರಿಂಟಿಂಗ್ ಪ್ರೆಸ್‌ನಲ್ಲಿ ಕೆಲಸ ಮಾಡುತ್ತಿದ್ದು, ತಾಯಿ ಬ್ಯೂಟಿಷಿಯನ್ ಆಗಿದ್ದಾರೆ.

ಐಎಎಸ್‌ ಅಧಿಕಾರಿಯಾಗುವ ಕನಸು: ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಪ್ರತ್ವಿತಾ, ‘ಮುಂದಿನ ವ್ಯಾಸಂಗದ ಬಳಿಕ ಯುಪಿಎಸ್‌ಸಿ ಪರೀಕ್ಷೆ ಬರೆದು ಐಎಎಸ್ ಅಧಿಕಾರಿಯಾಗುವ ಕನಸಿದೆ. ಶಿಕ್ಷಕರು ಸಂಜೆ 6ರ ತನಕ ನಿರಂತರ ತರಬೇತಿ ನೀಡಿರುವುದು ಅಂಕ ಗಳಿಸಲು ಸಹಕಾರಿಯಾಯಿತು. ಸಾಧನೆಗೆ ಬೆನ್ನೆಲುಬಾಗಿ ನಿಂತಿರುವ ಶಾಲೆಯ ಆಡಳಿತ ಮಂಡಳಿ, ಬೋಧಕ–ಬೋಧಕೇತರ ಸಿಬ್ಬಂದಿ, ಪೋಷಕರಿಗೆ ಚಿರಋಣಿ’ ಎಂದು ಖುಷಿ ಹಂಚಿಕೊಂಡರು.

ಪ್ರತ್ವಿತಾ ಅವರನ್ನು ₹10 ಸಾವಿರ ನಗದು ಬಹುಮಾನ ನೀಡಿ ಶಾಲೆಯ ವತಿಯಿಂದ ಗೌರವಿಸಲಾಯಿತು. ಎಂ.ಎಂ.ಹೆಗ್ಡೆ ಎಜುಕೇಷನಲ್, ಚಾರಿಟಬಲ್ ಟ್ರಸ್ಟ್‌ ಅಧ್ಯಕ್ಷ ಎಂ. ಮಹೇಶ ಹೆಗ್ಡೆ ಮೊಳಹಳ್ಳಿ ಶುಭಹಾರೈಸಿದರು. ಸುಜ್ಞಾನ ಎಜುಕೇಷನಲ್ ಟ್ರಸ್ಟ್‌ ಅಧ್ಯಕ್ಷ ಡಾ.ರಮೇಶ್ ಶೆಟ್ಟಿ, ಕಾರ್ಯದರ್ಶಿ ಪ್ರತಾಪ್‌ ಚಂದ್ರ ಶೆಟ್ಟಿ, ಖಜಾಂಚಿ ಭರತ್ ಶೆಟ್ಟಿ, ಮುಖ್ಯಶಿಕ್ಷಕ ಪ್ರದೀಪ್‌ ಕುಮಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT