ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯಮಟ್ಟದ ಅಥ್ಲೆಟಿಕ್ಸ್‌ ಚಾಂಪಿಯನ್ ಶಿಪ್‌

Last Updated 6 ಸೆಪ್ಟೆಂಬರ್ 2021, 16:52 IST
ಅಕ್ಷರ ಗಾತ್ರ

ಉಡುಪಿ: ಅಜ್ಜಕರಾಡು ಜಿಲ್ಲಾ ಕ್ರೀಡಾಂಗಣದಲ್ಲಿ ಸೋಮವಾರ ಆರಂಭವಾದ ರಾಜ್ಯಮಟ್ಟದ ಹಿರಿಯರ ಹಾಗೂ 23 ವರ್ಷದೊಳಗಿನವರ ಮಹಿಳೆಯರ ಹಾಗೂ ಪುರುಷರ ಅಥ್ಲೆಟಿಕ್ಸ್‌ ಚಾಂಪಿಯನ್ ಶಿಪ್‌ಗೆ ಶಾಸಕ ರಘುಪತಿ ಭಟ್‌ ಚಾಲನೆ ನೀಡಿದರು.

ಹಿರಿಯರ 100 ಮೀಟರ್ಸ್‌ ಓಟದ ವಿಭಾಗದಲ್ಲಿ ಉಡುಪಿಯ ರೋಹಿತ್ ಪ್ರಥಮ, ಸಿ.ಟಿ ಅಂಡ್ ಎಫ್‌ನ ರಾಧಾಕೃಷ್ಣ ದ್ವಿತೀಯ, ಮೈಸೂರಿನ ರಾಧೇಶ್ ತೃತೀಯ ಸ್ಥಾನ ಪಡೆದರು. 400 ಮೀಟರ್ಸ್‌ನಲ್ಲಿ ಆಳ್ವಾಸ್ ಕಾಲೇಜಿನ ಗೌರಿ ಶಂಕರ್–1, ಮೈಸೂರಿನ ಗುರುಪ್ರಸಾದ್–2, ಆಳ್ವಾಸ್‌ನ ದೇವಯ್ಯ–3, 1,500 ಮೀಟರ್ಸ್‌ನಲ್ಲಿ ಕೆಎಸ್‌ಪಿಯ ಬಿ.ಕೆ.ಕುಮಾರಸ್ವಾಮಿ–1, ಮೈಸೂರಿನ ಕೆ.ದೀಪ್‌ರಾಜ್–2, ಧಾರವಾಡದ ಲಂಬಾನಿ ಲಕ್ಷ್ಮಣ್, 10,000 ಮೀಟರ್ಸ್‌ನಲ್ಲಿ ಧಾರವಾಡದ ಎನ್‌.ಡಿ.ಸುನೀಲ್‌–1, ಆಳ್ವಾಸ್‌ನ ಅನಿಲ್ ಕುಮಾರ್–2, ಮೈಸೂರಿನ ಲಕ್ಷ್ಮೀಶ–3 ಗೆಲುವು ಪಡೆದರು.

ಹೈಜಂಪ್‌ನಲ್ಲಿ ಬೆಂಗಳೂರು ಸ್ಪೋರ್ಟ್ಸ್‌ ಕ್ಲಬ್‌ನ ಎಸ್‌.ಹರ್ಷಿತ್‌–1, ಮೈಸೂರಿನ ರಾಥೋಡ್‌ ಲೋಕೇಶ್‌–2, ಆಳ್ವಾಸ್‌ನ ವೆಂಕಟೇಶ್‌–3, ಜಾವೆಲಿನ್ ಥ್ರೋನಲ್ಲಿ ಬೆಳಗಾವಿಯ ಆಕಾಶ್‌ ಗಂಗಾಧರ್ ಲಾಲ್–1, ತುಮಕೂರಿನ ಚಿಕ್ಕತಿಮ್ಮಯ್ಯ–2, ಆಳ್ವಾಸ್‌ನ ಶ್ರೀನಿವಾಸ್ ಮಂಚಾರ್3, 110 ಮೀಟರ್ಸ್‌ ಹರ್ಡಲ್ಸ್‌ನಲ್ಲಿ ಆಳ್ವಾಸ್‌ನ ಶ್ರೀಕಾಂತ್ ಮಧ್ಯಸ್ಥ–1, ದಕ್ಷಿಣ ಕನ್ನಡದ ಶ್ರವಣ್ ಎಸ್‌.ಉಲ್ಲಾಳ್‌–2, ಬೆಂಗಳೂರಿನ ಕೆ.ಹರೀಶ್‌ ಕ್ರಮವಾಗಿ ಗುರಿಮುಟ್ಟಿದರು.

ಮಹಿಳೆಯರ ವಿಭಾಗ: 100 ಮೀಟರ್ಸ್‌ನಲ್ಲಿ ಮೈಸೂರಿನ ರೀನಾ ಜಾರ್ಜ್‌–1, ಕೆನರಾ ಬ್ಯಾಂಕ್‌ನ ಎಂ.ಜಿ.ಪದ್ಮಿನಿ–2, ಎ.ಎಸ್‌.ಅಂಜು–3, 400 ಮೀಟರ್ಸ್‌ನಲ್ಲಿ ಕೆನರಾ ಬ್ಯಾಂಕ್‌ನ ಇಂಚರ–1, ಆಳ್ವಾಸ್‌ನ ಲಿಖಿತಾ–2, 1,500 ಮೀಟರ್ಸ್‌ನಲ್ಲಿ ಆಳ್ವಾಸ್‌ನ ದೀಕ್ಷಾ–1, ಎಲ್‌.ಡಿ.ಪ್ರಿಯಾ–2, ದಕ್ಷಿಣ ಕನ್ನಡದ ಮರಿಯಾ–3, 10,000 ಮೀಟರ್ಸ್‌ನಲ್ಲಿ ಆಳ್ವಾಸ್‌ನ ಲಕ್ಷ್ಮಿ–1, ಮಾಲಾಶ್ರೀ–2, ಧನುಶಾ–3, ಉದ್ದಜಿಗಿತದಲ್ಲಿ ಐಶ್ವರ್ಯಾ–1, ಯಾಸ್ಮಿನ್‌–2, ಬೆಂಗಳೂರಿನ ನಿವೇದಿತಾ–2, ಎತ್ತರ ಜಿಗಿತದಲ್ಲಿ ಆಳ್ವಾಸ್‌ನ ಚೈತ್ರಾ –1, ಸಮ್ರೀನ್‌ ಕೆ.ಶೇಖ್‌–2, ಡಿಸ್ಕಸ್‌ ಥ್ರೋನಲ್ಲಿ ಕಾರವಾರದ ನಿವೇದಿತಾ ಸಾವಂತ್–1, ಚಾಮರಾಜನಗರದ ಪಿ.ರೋಷನಿ–2, ಜಾವೆಲಿನ್ ಥ್ರೋನಲ್ಲಿ ಆಳ್ವಾಸ್‌ನ ಎಂ.ಎನ್‌.ಪಾರ್ವತಿ–1, ಮೈಸೂರಿನ ಪೂಜಾ–2, 100 ಮೀ. ಹರ್ಡಲ್ಸ್‌ನಲ್ಲಿ ಫ್ಯೂಷನ್‌ ಅಥ್ಲೆಟಿಕ್ಸ್ ಕ್ಲಬ್‌ನ ಮೇದಾ ರಾಜೇಶ್ ಕಾಮತ್–1, ಬೆಂಗಳೂರಿನ ನಿವೇದಿತಾ–2 ಗೆಲುವು ಸಾಧಿಸಿದರು.

23 ವರ್ಷದೊಳಗಿನ ಮಹಿಳೆಯರ ವಿಭಾಗ: 100 ಮೀಟರ್ಸ್‌ನಲ್ಲಿ ಆರ್‌.ಹರ್ಷಿಣಿ–1, ಮೋನಿಕಾ ರುಕ್ಮಯ್ಯ ಗೌಡ–2, ಅಮುದಾ ಯಾಲಿನಿ–3, 1,500 ಮೀಟರ್ಸ್‌ನಲ್ಲಿ ರೇಖಾ ಬಿ.ಪೈರೋಜಿ–1, ಪಿ.ಚೈತ್ರಾ–2, ಪ್ರತೀಕ್ಷಾ–3, 10000 ಮೀಟರ್ಸ್‌ನಲ್ಲಿ ಚೈತ್ರಾ ದೇವಾಡಿಗ–1, ಶಾಹಿನ್‌–2, ನಾಗಾಶ್ರೀ–3, ಉದ್ದಜಿಗಿದಲ್ಲಿ ಶ್ರೀವೇವಿಕಾ–1, ಐಶ್ವರ್ಯಾ ಹಿರೋಜಿ–2, ಅಂಕಿತಾ–3, ಎತ್ತರ ಜಿಗಿತದಲ್ಲಿ ಎನ್‌.ಪಾವನಾ–1, ಸಿಂಚನಾ–2, ಕವನಾ–3, ಡಿಸ್ಕಸ್‌ ಥ್ರೋನಲ್ಲಿ ಶೃತಿ ಉಳ್ಳಪ್ಪ ಕಲಿವಾಳ್‌–1, ಸುಷ್ಮಾ–2, ಬಿ.ಸುಷ್ಮಾ–3, ಜಾವೆಲಿನ್ ಥ್ರೋನಲ್ಲಿ ಕರಿಷ್ಮಾ ಸನಿಲ್‌–1, ನಿಧಿ–2, ಜೀವಿತಾ–3, 100 ಮೀ. ಹರ್ಡಲ್ಸ್‌ನಲ್ಲಿ ಚಿತ್ರಾ ದಾಸ್‌–1, ಸಿಂಧು–2, ದೀಕ್ಷಾ–3 ಕ್ರಮವಾಗಿ ಸ್ಥಾನ ಪಡೆದರು.

ಪುರುಷರ ವಿಭಾಗ: 100 ಮೀಟರ್ಸ್‌ನಲ್ಲಿ ಶಶಿಕಾಂತ್–1, ಕುಶಾಲ್‌–2, ರಾಜ್ ಧೃವ–3, 400 ಮೀಟರ್ಸ್‌ನಲ್ಲಿ ಎನ್‌.ಎಸ್.ವಿನಾಯಕ್‌ –1, ರಿನ್ಸ್‌ ಜೋಸೆಫ್‌–2, ನಿಹಾಲ್ ಜೊಯಿಲ್–3, 1500 ಮೀಟರ್ಸ್‌ನಲ್ಲಿ ನಾಗರಾಜ್‌–1, ರೋಹಿತ್‌–2, ಸುದೀಪ–3, 10000 ಮೀಟರ್ಸ್‌ನಲ್ಲಿ ಶಿವಾಜಿ–1, ನರಸಿಂಹ್ ಪಾಟೀಲ್‌–2, ನವದೀಪ್‌–3, ಎತ್ತರ ಜಿಗಿತದಲ್ಲಿ ಯಶಸ್‌–1, ವರುಣ್ ವರ್ಣೆಕರ್–2, ಸೃಜನ್‌ ಜನಾರ್ದನ್‌–3, ಡಿಸ್ಕ್‌ಸ್‌ ಥ್ರೋನಲ್ಲಿ ನಾಗೇಂದ್ರ ಅಣ್ಣಪ್ಪ–1, ಮೊಹಮದ್ ಸಕ್ಲೈನ್ ಅಹಮದ್‌–2, ಯಶಸ್‌ ಅಯ್ಯಪ್ಪ–3, ಜಾವೆಲಿನ್ ಥ್ರೋನಲ್ಲಿ ಶಾರುಕ್ ತಾರಿಹಾಳ್‌–1, ಪ್ರಮೋದ್ ಎಂ.ಮೇಟಿ–2, ಸಂದೇಶ್ ನಾಯಕ್‌–3, 110 ಮೀಟರ್ಸ್‌ ಹರ್ಡಲ್ಸ್‌ನಲ್ಲಿ ಕೃಷಿಕ್‌–1, ಅದ್ವಿತ್ ಶೆಟ್ಟಿ–2, ಸುಶಾಂತ್–3 ಸ್ಥಾನ ಪಡೆದರು.

ಶುಕ್ರವಾರ ಚಾಂಪಿಯನ್ ಶಿಪ್‌ನ್‌ ಕೊನೆಯ ದಿನವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT