ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಳುಕೂಟದ ಅಧ್ಯಕ್ಷರಾಗಿ ಜಯಕರ ಶೆಟ್ಟಿ ಇಂದ್ರಾಳಿ ಪುನಾರಾಯ್ಕೆ

Last Updated 7 ಸೆಪ್ಟೆಂಬರ್ 2022, 2:25 IST
ಅಕ್ಷರ ಗಾತ್ರ

ಉಡುಪಿ: ಕರಾವಳಿಯ ಪ್ರಸಿದ್ಧ ಸಾಂಸ್ಕೃತಿಕ ಕಲಾಸಂಸ್ಥೆಯಾಗಿರುವ ತುಳುಕೂಟ ಉಡುಪಿ ನೂತನ ಅಧ್ಯಕ್ಷರಾಗಿ ಸಹಕಾರಿ ಧುರೀಣ ಬಿ.ಜಯಕರ ಶೆಟ್ಟಿ ಇಂದ್ರಾಳಿ ಪುನಾರಾಯ್ಕೆ ಆಗಿದ್ದಾರೆ.

ಉಡುಪಿಯ ಜಗನ್ನಾಥ ಸಭಾಭವನದಲ್ಲಿ ನಡೆದ ತುಳುಕೂಟ ಉಡುಪಿಯ ವಾರ್ಷಿಕ ಮಹಾಸಭೆಯಲ್ಲಿ 2022–23ನೇ ಸಾಲಿಗೆ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.

ಉಪಾಧ್ಯಕ್ಷರಾಗಿ ದಿವಾಕರ ಸನಿಲ್, ಸದಾಶಿವ ಭಟ್, ಪ್ರಧಾನ ಕಾರ್ಯದರ್ಶಿಯಾಗಿ ಗಂಗಾಧರ ಕಿದಿಯೂರ್, ಜತೆ ಕಾರ್ಯದರ್ಶಿಗಳಾಗಿ ಮೋಹನ್ ಶೆಟ್ಟಿ ಮೂಡನಿಡಂಬೂರು, ಉದಯಕುಮಾರ್, ರಶ್ಮೀ ರಮೇಶ್ ಶೆಣೈ, ಕೋಶಾಧಿಕಾರಿಯಾಗಿ ಎಂ.ಜಿ.ಚೈತನ್ಯ, ಸಂಘಟನಾ ಕಾರ್ಯದರ್ಶಿಗಳಾಗಿ ಮನೋಹರ್ ಶೆಟ್ಟಿ ತೋನ್ಸೆ, ಸಂತೋಷ್ ಕುಮಾರ್, ಆಂತರಿಕ ಲೆಕ್ಕಪರಿಶೋಧಕರಾಗಿ ಯು.ಜೆ. ದೇವಾಡಿಗ, ತುಳು ಮಿನದನ ಕಾರ್ಯಕ್ರಮ ಸಂಚಾಲಕರಾಗಿ ಡಾ. ಯಾದವ ವಿ.ಕರ್ಕೇರ, ಕೆಮ್ತೂರು ನಾಟಕ ಸ್ಫರ್ಧೆ ಸಂಚಾಲಕರಾಗಿ ಪ್ರಭಾಕರ ಭಂಡಾರಿ, ನಿಟ್ಟೂರು ತುಳು ಭಾವಗೀತೆ ಸ್ಪರ್ಧೆ ಸಂಚಾಲಕರಾಗಿ ಪ್ರಕಾಶ್ ಸುವರ್ಣ ಕಟಪಾಡಿ ಅವರ ಆಯ್ಕೆ ಮಾಡಲಾಯಿತು.

ಪಣಿಯಾಡಿ ಕಾದಂಬರಿ ಸ್ಫರ್ಧೆ ಸಂಚಾಲಕರಾಗಿ ಶಿಲ್ಪಾ ಜೋಷಿ, ಮದರಂಗಿದ ರಂಗ್ ಸ್ಪರ್ಧೆ ಸಂಚಾಲಕರಾಗಿ ಯಶೋಧಾ ಕೇಶವ್, ಆಟಿದ ಕಷಾಯ ಕಾರ್ಯಕ್ರಮದ ಸಂಚಾಲಕರಾಗಿ ರತ್ನಾಕರ ಇಂದ್ರಾಳಿ, ಸೋನದ ಸೇಸೆ ಕಾರ್ಯಕ್ರಮ ಸಂಚಾಲಕರಾಗಿ ಶೇಖರ್ ಕಲ್ಮಾಡಿ, ತುಳುವೆರೆ ಗೊಬ್ಬುಲು ಸ್ಫರ್ಧೆ ಸಂಚಾಲಕರಾಗಿ ಮೊಹಮ್ಮದ್ ಮೌಲಾ, ತುಳುವ ನಡಕೆ ಸ್ಫರ್ಧೆ ಸಂಚಾಲಕರಾಗಿ ದಯಾನಂದ, ಶಾಲಾ ಪಠ್ಯ ಸ್ಫರ್ಧೆ ಸಂಚಾಲಕರಾಗಿ ವಿಶ್ವನಾಥ ಬಾಯರಿ.

ಆಟಿದ ಲೇಸ್ ಸಂಚಾಲಕರಾಗಿ ಜ್ಯೋತಿ ಎಸ್.ದೇವಾಡಿಗ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಮನೋರಮ ಎಸ್. ಶೆಟ್ಟಿ, ಲಕ್ಷೀಕಾಂತ್ ಬೆಸ್ಕೂರ್, ತಾರಾ ಆಚಾರ್ಯ, ಗಣೇಶ್ ಕೋಟ್ಯಾನ್, ಯು.ಎಸ್.ಉಮ್ಮರ್, ಪ್ರಸನ್ನ, ಅಶೋಕ್ ಡಿ. ಶೆಟ್ಟಿ, ಶೋಭಾ ಶೆಟ್ಟಿ, ಜಯರಾಮ್ ಶೆಟ್ಟಿಗಾರ್, ಭುವನ ಪ್ರಸಾದ ಹೆಗ್ಡೆ, ದಯಾನಂದ ಶೆಟ್ಟಿ ದೆಂದೂರ್, ವೇದಾವತಿ ಶೆಟ್ಟಿ, ವಿದ್ಯಾ ಸರಸ್ವತಿ, ಸದಾನಂದ ಆರ್.ಶೆಟ್ಟಿ, ಅಜಿತ್ ಶೆಟ್ಟಿ, ಭಾರತಿ ಟಿ.ಕೆ, ರೂಪಾ ಆಚಾರ್ಯ, ಸಂಧ್ಯಾ ಉದಯ್, ಪ್ರಭಾವತಿ, ದಯಾಸಿನಿ, ಸ್ಥಾಪಕಾಧ್ಯಕ್ಷರಾಗಿ ಡಾ. ಭಾಸ್ಕರಾನಂದ ಕುಮಾರ್, ಗೌರವ ಸಲಹೆಗಾರರಾಗಿ ಬನ್ನಂಜೆ ಬಾಬು ಅಮೀನ್, ಮುರಳೀಧರ ಉಪಾಧ್ಯಾಯ, ವಿಶ್ವನಾಥ ಶೆಣೈ, ಎಸ್.ವಿ.ಭಟ್, ಡಾ.ಗಣನಾಥ ಎಕ್ಕಾರು ಹಾಗೂ 15 ವಿಶೇಷ ಆಹ್ವಾನಿತರನ್ನು ಆಯ್ಕೆ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT