ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಳುನಾಡ್‌ ಮ್ಯಾಟ್ರಿಮೊನಿ.ಕಾಮ್‌ ಬಿಡುಗಡೆ

Last Updated 20 ಮಾರ್ಚ್ 2023, 15:48 IST
ಅಕ್ಷರ ಗಾತ್ರ

ಉಡುಪಿ: ಮೊಗವೀರ ಸಮುದಾಯದ ಅವಿವಾಹಿತ ಯುವಕ ಯುವತಿಯರು ಸೂಕ್ತ ಜೀವನ ಸಂಗಾತಿ ಹುಡುಕಿಕೊಳ್ಳಲು ವೇದಿಕೆಯಾಗಿ ತುಳುನಾಡ ಧ್ವನಿ ತುಳು ಅಂತರ್ಜಾಲ ಪತ್ರಿಕೆಯ ವತಿಯಿಂದ ‘ತುಳುನಾಡ್‌ ಮ್ಯಾಟ್ರಿಮೊನಿ.ಕಾಮ್‌’ ವಧುವರಾನ್ವೇಷಣೆ ವೆಬ್‌ಸೈಟ್ ಆರಂಭಿಸಲಾಗಿದೆ ಎಂದು ಯಶೋಧಾ ತಿಳಿಸಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಮೊಗವೀರ ಸಮುದಾಯಕ್ಕೆ ಸೇರಿದ ಯುವಕ ಯುವತಿಯರು ಉಚಿತವಾಗಿ ಮ್ಯಾಟ್ರಿಮೊನಿ ಪೋರ್ಟಲ್‌ನಲ್ಲಿ ಹೆಸರು ನೋಂದಾಯಿಸಿಕೊಳ್ಳಬಹುದು. ಪ್ರೊಫೈಲ್‌ಗಳನ್ನು ಸರಿಯಾಗಿ ಪರಿಶೀಲಿಸಿದ ಬಳಿಕ ಹಾಗೂ ಪರಸ್ಪರ ಒಪ್ಪಿಗೆಯ ಮೇರೆಗೆ ವಧು–ವರರಿಗೆ ಮಾಹಿತಿ ನೀಡಲಾಗುವುದು. ನೋಂದಣಿಗೆ ಆಧಾರ್ ಕಾರ್ಡ್‌, ಜಾತಿ ಪ್ರಮಾಣಪತ್ರ ಸೇರಿದಂತೆ ಅಗತ್ಯ ದಾಖಲೆಗಳನ್ನು ಪಡೆದು ನೈಜತೆ ಪರಿಶೀಲಿಸಲಾಗುವುದು ಎಂದರು.

ಕುಂದಾಪುರದ ಫೋರ್ಥ್ ಫೋಕಸ್‌ ಸಂಸ್ಥಾಪಕ ವಿ.ಗೌತಮ್ ನಾವಡ ಪೋರ್ಟಲ್ ನಿರ್ಮಾಣ ಮಾಡಿದ್ದು ಅವಿವಾಹಿತರು ಸದುಪಯೋಗಪಡಿಸಿಕೊಳ್ಳಬಹುದು ಎಂದರು.

ಇದೇವೇಳೆ ತುಳುನಾಡ್‌ಮ್ಯಾಟ್ರಿಮೊನಿ.ಕಾಮ್ ವೆಬ್‌ಸೈಟ್‌ ಅನ್ನು ಉದ್ಯಮಿ ಪ್ರಸಾದ್ ರಾಜ್ ಕಾಂಚನ್ ಬಿಡುಗಡೆ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಸರಿತಾ, ನಯನಾ ಗಣೇಶ್‌, ರಾಜೇಂದ್ರ ಸುವರ್ಣ, ಗೌತಮ್ ನಾವಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT