ಬುಧವಾರ, ನವೆಂಬರ್ 13, 2019
28 °C

ಬೈಂದೂರು | ಈಜಲು ಹೋಗಿದ್ದ ಇಬ್ಬರು ವಿದ್ಯಾರ್ಥಿಗಳು ನಾಪತ್ತೆ, ಇಬ್ಬರ ರಕ್ಷಣೆ

Published:
Updated:

ಉಡುಪಿ: ಬೈಂದೂರು ಸಮೀಪದ ಹಳಗೇರಿ ಬಳಿ ಗುರುವಾರ ನದಿಗೆ ಈಜಲು ತೆರಳಿದ್ದ ನಾಲ್ವರು ಶಾಲಾ ವಿದ್ಯಾರ್ಥಿಗಳ ಪೈಕಿ ಇಬ್ಬರು ನಾಪತ್ತೆಯಾಗಿದ್ದಾರೆ. ಇಬ್ಬರನ್ನು ರಕ್ಷಣೆ ಮಾಡಲಾಗಿದೆ.

ವಿದ್ಯಾರ್ಥಿಗಳು ಇಲ್ಲಿನ ನಾಗೂರು ಗ್ರಾಮದ ಸಂದೀಪನ್‌ ಆಂಗ್ಲ ಮಾಧ್ಯಮ ಶಾಲೆಯಲ್ಲಿ 6 ಹಾಗೂ 7ನೇ ತರಗತಿ ಓದುತ್ತಿದ್ದಾರೆ.

ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದ್ದು, ಸ್ಥಳೀಯರ ಸಹಕಾರದೊಂದಿಗೆ ದೋಣಿ ಬಳಸಿ ಸಹಾಯದಿಂದ ನಾಪತ್ತೆಯಾದ ಮಕ್ಕಳ ಶೋಧ ನಡೆಸುತ್ತಿದ್ದಾರೆ.

(ಮಾಹಿತಿ ಅಪ್‌ಡೇಟ್ ಆಗಲಿದೆ)


ಮಕ್ಕಳನ್ನು ಹುಡುಕುತ್ತಿರುವ ಗ್ರಾಮಸ್ಥರು

 

ಪ್ರತಿಕ್ರಿಯಿಸಿ (+)