ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪತ್ತೆಯಾಗದ 6 ಮಂದಿಯ ಸೋಂಕಿನ ಮೂಲ

ಉಡುಪಿ: 28 ಜನರಲ್ಲಿ ಕೋವಿಡ್‌–19
Last Updated 7 ಜುಲೈ 2020, 15:25 IST
ಅಕ್ಷರ ಗಾತ್ರ

ಉಡುಪಿ: ಬೆಂಗಳೂರು, ಮಂಗಳೂರು, ತುಮಕೂರು ಜಿಲ್ಲೆಗಳ ಪ್ರಯಾಣ ಹಿನ್ನೆಲೆ ಹೊಂದಿರುವ ಆರು ಮಂದಿ ಸೇರಿ ಜಿಲ್ಲೆಯಲ್ಲಿ ಮಂಗಳವಾರ 28 ಜನರಿಗೆ ಕೋವಿಡ್‌–19 ಕಾಣಿಸಿಕೊಂಡಿದೆ.

ಸೋಂಕಿತರಲ್ಲಿ 19 ಪುರುಷರು ಹಾಗೂ 8 ಮಹಿಳೆಯರು ಹಾಗೂ ಒಬ್ಬಳು ಬಾಲಕಿ ಇದ್ದು, ಎಲ್ಲರಿಗೂ ಕೋವಿಡ್‌ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಪಿ.25589,25590,25591, 25608,25609,25611 ಸೋಂಕಿತರ ಸಂಪರ್ಕ ಪತ್ತೆ ಹೆಚ್ಚಲಾಗುತ್ತಿದೆ. ಪಿ.18668 ಸೋಂಕಿತ ವ್ಯಕ್ತಿಯ ಪ್ರಾಥಮಿಕ ಸಂಪರ್ಕದಿಂದ ಇಬ್ಬರಿಗೆ, ಪಿ.11338 ಸಂಪರ್ಕದಿಂದ ಇಬ್ಬರಿಗೆ, ಪಿ.12047 ವ್ಯಕ್ತಿಯಿಂದ ಮೂವರಿಗೆ, ಪಿ.25296, ಪಿ.2067 ವ್ಯಕ್ತಿಗಳಿಂದ ಇಬ್ಬರಿಗೆ ಸೋಂಕು ತಗುಲಿದೆ. ಮಹಾರಾಷ್ಟ್ರದಿಂದ ಜಿಲ್ಲೆಗೆ ಬಂದ ಇಬ್ಬರಿಗೆ ಹಾಗೂ ದುಬೈನಿಂದ ಬಂದ ಒಬ್ಬರಿಗೆ ಸೋಂಕು ಕಾಣಿಸಿಕೊಂಡಿದೆ.

ಮಂಗಳವಾರ 1,231 ಜನರ ಗಂಟಲ ದ್ರವದ ಮಾದರಿಯನ್ನು ಪ್ರಯೋಗಾಲಯಗಳಿಗೆ ಕಳುಹಿಸಲಾಗಿದ್ದು, 2627 ವರದಿಗಳು ಬರುವುದು ಬಾಕಿ ಇದೆ. ಸೋಂಕಿನ ಲಕ್ಷಣಗಳು ಕಂಡುಬಂದ 37 ಮಂದಿಯನ್ನು ಐಸೊಲೇಷನ್‌ ವಾರ್ಡ್‌ಗೆ ದಾಖಲಿಸಲಾಗಿದೆ.

ಮಂಗಳವಾರ 28 ಸೇರಿ ಜಿಲ್ಲೆಯಲ್ಲಿ ಇದುವರೆಗೂ 1,182 ಮಂದಿ ಸೋಂಕಿನಿಂದ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. 205 ಸಕ್ರಿಯ ಪ್ರಕರಣಗಳು ಬಾಕಿ ಇವೆ.

ಅಂಕಿ ಅಂಶ...

ಆರೋಗ್ಯ ತಪಾಸಣೆ–44

ಆಸ್ಪತ್ರೆಯಲ್ಲಿ ವೈದ್ಯಕೀಯ ನಿಗಾ–0

ಗುಣಮುಖರಾದವರು–28

ಹೊಸ ಸೇರ್ಪಡೆ-37

ಹೋಂ ಕ್ವಾರಂಟೈನ್‌ ಪೂರ್ಣ-0

ಪರೀಕ್ಷೆಗೆ ಕಳುಹಿಸಿದ ಮಾದರಿ–1231

ವರದಿ ಪಾಸಿಟಿವ್‌–28

ವರದಿ ನೆಗೆಟಿವ್‌-216

–––––––––
ಆರೋಗ್ಯ ತಪಾಸಣೆ–6,045

ಹೋಂ ಕ್ವಾರಂಟೈನ್‌–1170

ಮಾದರಿ–19,773

ಪಾಸಿಟಿವ್‌–1,390

ನೆಗೆಟಿವ್‌–15,756

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT