ಶುಕ್ರವಾರ, ನವೆಂಬರ್ 22, 2019
27 °C

ಆಟೋ‌ ಪಲ್ಟಿ: 8 ಮಕ್ಕಳಿಗೆ ಗಾಯ

Published:
Updated:

ಉಡುಪಿ: ಶಾಲೆಗೆ ಮಕ್ಕಳನ್ನು ಕರೆತರುತ್ತಿದ್ದ ಆಟೋ ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿದ್ದು 8 ಮಕ್ಕಳಿಗೆ ಪೆಟ್ಟುಬಿದ್ದಿದ್ದು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಂಗಳವಾರ ಶಾಂತಿನಗರದಿಂದ ಕಡಿಯಾಳಿಗೆ ಆಟೊ ಬರುತ್ತಿದ್ದಾಗ ಇಂದ್ರಾಳಿ ಸಮೀಪ ಅವಘಡ ಸಂಭವಿಸಿದೆ. ಮುಂದೆ ಹೋಗುತ್ತಿದ್ದ ಬೈಕ್ ಗೆ ದಿಡೀರ್ ಬ್ರೇಕ್ ಹಾಕಿದ ಪರಿಣಾಮ, ಆಟೊ ನಿಯಂತ್ರಣ ತಪ್ಪು ಮಗುಚಿ ಬಿದ್ದಿದೆ. ಯಾವುದೇ ಪ್ರಾಣಾಪಾಯಗಳು ಆಗಿಲ್ಲ.

ಸ್ಥಳಕ್ಕೆ ಮಣಿಪಾಲ ಠಾಣೆಯ ಪೊಲೀಸರು ಆಗಮಿಸಿದ್ದು ಘಟನೆಯ ಮಾಹಿತಿ ಪಡೆದುಕೊಂಡಿದ್ದಾರೆ.

ಪ್ರತಿಕ್ರಿಯಿಸಿ (+)