ಮಲ್ಪೆ ಬೀಚ್‌ಗೆ ಬಾಂಬ್‌ ಹಾಕುವುದಾಗಿ ವಿಡಿಯೊ ಮಾಡಿದ್ದ ಆರೋಪಿ ಬಂಧನ

ಮಂಗಳವಾರ, ಮಾರ್ಚ್ 19, 2019
20 °C

ಮಲ್ಪೆ ಬೀಚ್‌ಗೆ ಬಾಂಬ್‌ ಹಾಕುವುದಾಗಿ ವಿಡಿಯೊ ಮಾಡಿದ್ದ ಆರೋಪಿ ಬಂಧನ

Published:
Updated:

ಉಡುಪಿ: ಮಲ್ಪೆ ಬೀಚ್‌ಗೆ ಬಾಂಬ್‌ ಹಾಕುವುದಾಗಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ಆತಂಕ ಸೃಷ್ಟಿಸಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಮಲ್ಪೆ ಸಮೀಪದ ತೊಟ್ಟ ನಿವಾಸಿ ಸೃಜನ್ (18) ಆರೋಪಿ. ಬಂಧಿತನಿಂದ ಮೊಬೈಲ್‌ ವಶಪಡಿಸಿಕೊಂಡಿರುವ ಪೊಲೀಸರು ತೀವ್ರ ವಿಚಾರಣೆಗೊಳಪಡಿಸಿದ್ದಾರೆ.

ಬಂಧನ ಹೇಗೆ?

ಶುಕ್ರವಾರ ಮಲ್ಪೆ ನಿವಾಸಿಯೊಬ್ಬರು ಬಾಂಬ್‌ ಬೆದರಿಕೆ ವಿಡಿಯೋವನ್ನು ಮಲ್ಪೆ ಪೊಲೀಸರಿಗೆ ನೀಡಿದ್ದರು. ವಿಡಿಯೋ ಪರಿಶೀಲಿಸಿ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡ ಪೊಲೀಸರು ಮಲ್ಪೆ ಬೀಚ್‌ ಪರಿಸರದಲ್ಲಿರುವ ಅಂಗಡಿಗಳನ್ನು ತಪಾಸಣೆಗೊಳಪಡಿಸಿದರು.

ನೇಪಾಳ ಮೂಲದ ಯುವಕ ನೀಡಿದ ಮಾಹಿತಿ ಆಧರಿಸಿ ತೊಟ್ಟಂನಲ್ಲಿ ಆರೋಪಿ ಸೃಜನ್‌ನನ್ನು ಬಂಧಿಸಲಾಯಿತು. ವಿಚಾರಣೆ ಸಂದರ್ಭ ತಾನೇ ವಿಡಿಯೋ ಮಾಡಿರುವುದಾಗಿ ಸೃಜನ್ ಒಪ್ಪಿಕೊಂಡಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

ಆರೋಪಿ ಕುರಿ ಕಾಯುವ ಕೆಲಸ ಮಾಡುತ್ತಿದ್ದು, ತಂದೆ ಪ್ಲಾಸ್ಟಿಕ್ ಅಂಗಡಿ ನಡೆಸುತ್ತಾರೆ. ಯಾವ ಉದ್ದೇಶದಿಂದ ವಿಡಿಯೋ ಮಾಡಲಾಗಿದೆ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !